ಜಾನಪದ ಹಾಡುಗಳ ಮೂಲಕ ಸುಗ್ಗಿ ಸಂಭ್ರಮದ ಲೋಹ್ರಿ ಹಬ್ಬ ಆಚರಿಸುತ್ತಿರುವ ಭಾರತೀಯ ಸೇನೆಯ ಯೋಧರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
ಸಂಕ್ರಾಂತಿ ಸಂದರ್ಭದಲ್ಲಿ ದೇಶದ ಉತ್ತರದ ಗಡಿಗಳಲ್ಲಿ ಇರುವ ಕೊರೆಯುವ ಚಳಿಯ ನಡುವೆಯೂ ಯೋಧರ ಉತ್ಸಾಹ ಕೊಂಚವೂ ಬತ್ತಿಲ್ಲ ಎಂದು ತೋರುವ ಈ ಕ್ಲಿಪ್ನಲ್ಲಿ ಸೇನಾ ಜವಾನರು ಕಟಾವಿನ ಹಬ್ಬವನ್ನು ಭಾರೀ ಸಂತಸದಲ್ಲಿ ಸಂಭ್ರಮಿಸುತ್ತಿದ್ದಾರೆ. ಮಂಜು ಸುರಿಯುತ್ತಿರುವ ನಡುವೆಯೂ ಜವಾನರ ಸಂಭ್ರಮಕ್ಕೇನೂ ಕಮ್ಮಿಯಾಗಿಲ್ಲ.
ಮೇಜರ್ ಡಿಪಿ ಸಿಂಗ್ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಕಂಡ ನೆಟ್ಟಿಗರಲ್ಲಿ ಅನೇಕರು ಯೋಧರಿಗೆ ಧನ್ಯವಾದ ಸಲ್ಲಿಸಿದರೆ, ಇನ್ನಷ್ಟು ಮಂದಿ ಅವರ ಹುಮ್ಮಸ್ಸು ಮತ್ತು ಸ್ಪೂರ್ತಿಯನ್ನು ಕೊಂಡಾಡಿದ್ದಾರೆ.