ನೆಲದ ಮೇಲೆ ಜೀವಂತ ಇರುವ ಅತ್ಯಂತ ಹಿರಿಯ ಪ್ರಾಣಿಯಾದ ಜೋನಾಥನ್ ಹೆಸರಿನ ಈ ಆಮೆಗೆ ಈ ವರ್ಷ 190 ವರ್ಷ ತುಂಬಲಿದೆ.
“ಈ ವರ್ಷ ತನ್ನ 190ನೇ ಹುಟ್ಟುಹಬ್ಬ ಆಚರಿಸಲಿರುವ ಜೋನಾಥನ್ ಜಗತ್ತಿನ ಅತ್ಯಂತ ಹಿರಿಯ ಆಮೆಯಾಗಿದ್ದಾನೆ,” ಎಂದು ಗಿನ್ನೆಸ್ ವಿಶ್ವ ದಾಖಲೆಯ ಬ್ಲಾಗ್ ತಿಳಿಸಿದೆ. ಜೋನಾಥನ್ 1832ರಲ್ಲಿ ಜನಿಸಿರಬಹುದು ಎಂದು ನಂಬಲಾಗಿದೆ.
“ಜೋನಾಥನ್ 1882ರಲ್ಲಿ ಸೀಶೆಲ್ಸ್‌ನಿಂದ ಸೇಂಟ್ ಹೆಲೆನಾಗೆ ಆಗಮಿಸಿದಾಗ ಆತ ಪೂರ್ಣವಾಗಿ ಪ್ರೌಢನಾಗಿದ್ದು, ಆಗ ಆತನ ವಯಸ್ಸು 50 ಎಂದು ವಾಸ್ತವಿಕಂದಾಜು ಮಾಡಲಾಗಿತ್ತು. ವಾಸ್ತವದಲ್ಲಿ ಆತ ನಾವು ಅಂದಾಜಿಸಿದ್ದಕ್ಕಿಂತ ಹೆಚ್ಚು ಹಿರಿಯನಾಗಿದ್ದಾನೆ,” ಎಂದು ಗಿನ್ನೆಸ್ ವಿಶ್ವ ದಾಖಲೆ ತಿಳಿಸಿದೆ.
ಆಮೆಗಳ ಪೈಕಿ ಅತ್ಯಂತ ಹಿರಿಯ ಎಂಬ ದಾಖಲೆಯನ್ನು ಈ ಹಿಂದೆ ಹೊಂದಿದ್ದ ಬೇರೊಂದು ಆಮೆ 188 ವರ್ಷ ಬದುಕಿತ್ತು ಎನ್ನಲಾಗಿದೆ.