ನವದೆಹಲಿ: ರೆಡಿಮೇಡ್ ಬಟ್ಟೆಗಳ ದರ ಶೇಕಡ 15 ರಿಂದ 20 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ತಯಾರಿಕೆ ವೆಚ್ಚ ಹೆಚ್ಚಳದ ಕಾರಣ ಬ್ರಾಂಡೆಡ್ ರೆಡಿಮೇಡ್ ಬಟ್ಟೆಗಳ ದರ ಹೆಚ್ಚಳವಾಗಿ ಗ್ರಾಹಕರಿಗೆ ಹೊರೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ ಮಂಡಳಿ ಬಟ್ಟೆ ಮೇಲಿನ GST ಯನ್ನು ಶೇಕಡ 10 ರಿಂದ 12 ರಷ್ಟು ಹೆಚ್ಚಳ ಮಾಡಿದರೆ ರೆಡಿಮೇಡ್ ಬಟ್ಟೆಗಳ ದರ ಮತ್ತಷ್ಟು ದುಬಾರಿಯಾಗಲಿದೆ.
ದಾರ, ನೂಲು, ಹತ್ತಿ, ಪ್ಯಾಕೇಜ್ ಸಾಮಗ್ರಿಗಳ ಬೆಲೆ ಏರಿಕೆ, ಸಾಗಾಣಿಕೆ ವೆಚ್ಚ, ಗಾರ್ಮೆಂಟ್ಸ್ ಖರ್ಚು ವೆಚ್ಚ ಹೆಚ್ಚಾಗುತ್ತಿದೆ. ಕೊರೋನಾ ಲಾಕ್ಡೌನ್ ನಿಂದಾಗಿ ಉದ್ಯಮ ಸಂಕಷ್ಟದಲ್ಲಿದ್ದು, ಬ್ರಾಂಡೆಡ್ ರೆಡಿಮೇಡ್ ಬಟ್ಟೆಗಳ ದರ ಶೇ. 15 ರಿಂದ 20 ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.