ಉತ್ತರ ಪ್ರದೇಶದ ಓರ್ವ ಸಚಿವ ಹಾಗೂ ಒಬ್ಬರು ಅಥವಾ ಮೂವರು ಬಿಜೆಪಿ ಶಾಸಕರು ಜನವರಿ 20ರವರೆಗೆ ಪ್ರತಿದಿನ ರಾಜೀನಾಮೆ ನೀಡುತ್ತಾರೆ ಎಂದು ಧರ್ಮ ಸಿಂಗ್ ಸೈನಿ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರದಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸಂಪುಟಕ್ಕೆ ಸೈನಿ ರಾಜೀನಾಮೆ ನೀಡಿದ್ದಾರೆ. ಅಂದಹಾಗೆ ಈ ರೀತಿ ಸಂಪುಟಕ್ಕೆ ರಾಜೀನಾಮೆ ನೀಡಿದ ಮೂರನೇ ಸಚಿವರು ಇವರಾಗಿದ್ದಾರೆ. ವಿಧಾನಸಭೆ ಚುನಾವಣೆಗೆ ಕೇವಲ 1 ತಿಂಗಳು ಬಾಕಿ ಇರುವಾಗಲೇ ಬಿಜೆಪಿ ತೊರೆದ ಏಳನೇ ಶಾಸಕ ಇವರಾಗಿದ್ದಾರೆ.
ನನ್ನ ಮಾತಿಗೆ ಪಕ್ಷದಲ್ಲಿ ಯಾವುದೇ ರೀತಿಯ ಬೆಲೆಯನ್ನು ನೀಡುತ್ತಿರಲಿಲ್ಲ. 140 ಶಾಸಕರು ಧರಣಿ ಕುಳಿತು ಧರಣಿ ನಡೆಸುವ ಕಾಲವೊಂದಿತ್ತು. ಆಗ ಸಕಾಲದಲ್ಲಿ ಎಲ್ಲದಕ್ಕೂ ಪ್ರತಿಕ್ರಿಯೆ ಸಿಗುತ್ತಿತ್ತು ಎಂದು ಸೈನಿ ಹೇಳಿದರು.
ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ರನ್ನು ಭೇಟಿ ಮಾಡಿದ್ದಾಗಿ ಸೈನಿ ಹೇಳಿದ್ದಾರೆ.