ಮನೆ, ಕಾರು ಸೇರಿದಂತೆ ಐಷಾರಾಮಿ ವಸ್ತುಗಳ ಖರೀದಿ ಪ್ರತಿಯೊಬ್ಬರ ಕನಸು. ಆದ್ರೆ ಎಲ್ಲರಿಗೂ ನಗದು ನೀಡಿ ಇವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಂಕ್ ಮೂಲಕ ಸಾಲ ಪಡೆದು ಇವುಗಳ ಖರೀದಿಗೆ ಮುಂದಾಗ್ತಾರೆ. ಬ್ಯಾಂಕ್ ನಿಂದ ಸಾಲ ಪಡೆಯುವುದು ಸುಲಭವಲ್ಲ. ಅನೇಕ ಬಾರಿ ಬ್ಯಾಂಕ್ ಗೆ ಸುತ್ತಾಡಿ, ಒಂದಿಷ್ಟು ದಾಖಲೆ ನೀಡಿದ್ರೆ ಮಾತ್ರ ಸಾಲ ಸಿಗುತ್ತದೆ. ಆದ್ರೆ ಮನೆಯಲ್ಲಿಯೇ ಕುಳಿತು ಆಧಾರ್ ಮೂಲಕ ಸಾಲ ಪಡೆಯಬಹುದು. ಯಸ್. ಅಚ್ಚರಿಯಾದ್ರೂ ಇದು ಸತ್ಯ.
ಮೊದಲು ಸಾಲವನ್ನು ತೆಗೆದುಕೊಳ್ಳಲು ಬಯಸುವ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ಗೆ ಹೋಗಬೇಕು. ಇಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಮೂಲಕ ಲಾಗಿನ್ ಮಾಡಬೇಕು. ಅದರ ನಂತರ ಪರ್ಸನಲ್ ಲೋನ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಅಲ್ಲಿ ನಿಮ್ಮ ಅರ್ಹತೆ ಮತ್ತು ಲೋನ್ ಮೊತ್ತದ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಪಡೆಯಬೇಕು. ನಂತ್ರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಹೆಸರು, ಹುಟ್ಟಿದ ದಿನಾಂಕ, ಮನೆ ವಿಳಾಸ, ಕಚೇರಿ ವಿಳಾಸ ಇತ್ಯಾದಿಯನ್ನು ನಮೂದಿಸಬೇಕು. ಇದರ ನಂತರ ನಿಮ್ಮ ಇತರ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಕೆವೈಸಿ ಪೂರ್ಣಗೊಳಿಸಬೇಕಾಗುತ್ತದೆ. ಆಗ ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಕೆವೈಸಿಯನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಪೂರ್ಣಗೊಳಿಸಬಹುದು. ಬ್ಯಾಂಕ್ ಇವೆಲ್ಲವನ್ನೂ ಪರಿಶೀಲಿಸಿ ಸಾಲವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತದೆ.