alex Certify 3ನೇ ಅಲೆಯಲ್ಲಿ ಚಿಕ್ಕವರ ಆರೋಗ್ಯದ ಆತಂಕ; ಹೆಚ್ಚಾಗುತ್ತಿದೆ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3ನೇ ಅಲೆಯಲ್ಲಿ ಚಿಕ್ಕವರ ಆರೋಗ್ಯದ ಆತಂಕ; ಹೆಚ್ಚಾಗುತ್ತಿದೆ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು

ಬೆಂಗಳೂರು: ಸದ್ಯ ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಮೂರನೇ ಅಲೆ ಶುರುವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆಯೇ ಇದು ಮಕ್ಕಳಿಗೆ ಹೆಚ್ಚು ಮಾರಕವಾಗಲಿದೆ ಎಂದು ಊಹಿಸಲಾಗಿತ್ತು. ಈಗ ಮಕ್ಕಳಲ್ಲಿ ಶ್ವಾಸಕೋಶದ ತೊಂದರೆ ಕಾಣಿಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ.

1 ರಿಂದ 10 ವರ್ಷದೊಳಗಿನ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಇದು ಜ್ವರ, ಕೆಮ್ಮು, ಶೀತ, ನೆಗಡಿಯ ರೂಪದಲ್ಲಿ ಕಂಡು ಬರುತ್ತದೆ. ಈ ಖಾಯಿಲೆ ಹೆಚ್ಚಾದರೆ ವೈರಲ್ ನ್ಯೂಮೋನಿಯಾ ಆಗಿ ಪರಿವರ್ತನೆ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸದ್ಯ ಬೆಂಗಳೂರು ನಗರದಲ್ಲಿನ ಆಸ್ಪತ್ರೆಯಲ್ಲಿನ ಕೆಲ ಮಕ್ಕಳು ಈ ಆರ್.ವಿ.ಎಸ್. ಸೋಂಕಿಗೆ ತುತ್ತಾಗುತ್ತಿದ್ದಾರೆ. ಆದರೆ, ಆರ್.ವಿ.ಎಸ್. ಕಾಣಿಸಿಕೊಂಡ ಮಕ್ಕಳನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿವೆ. ಹೀಗಿದ್ದರೂ ಈ ಸಂದರ್ಭದಲ್ಲಿ ಪಾಲಕರು ನಿರ್ಲಕ್ಷ್ಯ ವಹಿಸುವುದು ಸೂಕ್ತವಲ್ಲ. ಆರ್.ವಿ.ಎಸ್. ನಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದರೆ ಮಕ್ಕಳ ಜೀವಕ್ಕೆ ಅಪಾಯ ಹೆಚ್ಚಾಗಿರುತ್ತದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ಈ ಸಮಯದಲ್ಲಿ ಆರ್.ವಿ.ಎಸ್. ಹೆಚ್ಚಾಗಿ ಮಕ್ಕಳನ್ನು ಕಾಡುತ್ತಿರುತ್ತದೆ. ಹೀಗಾಗಿ ಮಕ್ಕಳನ್ನು ಹೆಚ್ಚು ಜನರು ಇರುವ ಪ್ರದೇಶಗಳಿಗೆ ಕರೆದುಕೊಂಡು ಹೋಗಬಾರದು. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಈ ಸಂದರ್ಭದಲ್ಲಿ ಮಕ್ಕಳ ಆರೈಕೆ ಅತಿ ಅವಶ್ಯವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...