ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕಗಳ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ ಮೀರತ್ ಕ್ಷೇತ್ರದಲ್ಲಿ ಮತದಾನ ಇದ್ದು, ಎಲ್ಲಾ ಪಕ್ಷಗಳ ನಾಯಕರು ಹಾಗೂ ಬೆಂಬಲಿಗರು ಅಲ್ಲಿ ಅಭಿಯಾನದಲ್ಲಿ ಬ್ಯುಸಿಯಾಗಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾದ ದಿವ್ಯಾಂಗಿಯೊಬ್ಬರು ಮೀರತ್ನ ಬೀದಿಗಳಲ್ಲಿ ಅಡ್ಡಾಡುತ್ತಾ ಬಿಜೆಪಿ ನಾಯಕನಿಗೆ ಮತಯಾಚನೆಯಲ್ಲಿ ಭಾಗಿಯಾಗಿದ್ದಾರೆ. ಕೇಸರಿ ಮಾಸ್ಕ್, ಟವೆಲ್ ಹಾಗೂ ತಮ್ಮ ವಿಶೇಷ ಟ್ರೈಸಿಕಲ್ ಅನ್ನೂ ಸಹ ಬಿಜೆಪಿಯ ಪಕ್ಷದ ಧ್ವಜದ ಬಣ್ಣದಲ್ಲಿ ತಂದಿರುವ ಈತ ಉ.ಪ್ರ. ಮುಖ್ಯಮಂತ್ರಿಯ ಚಿತ್ರವನ್ನು ತಮ್ಮ ದೇಹದಲ್ಲಿ ಟ್ಯಾಟೂ ಮಾಡಿಸಿಕೊಂಡಿದ್ದಾರೆ. ಅಮಿತ್ ಗೌರ್ ಹೆಸರಿನ ಈತ ತಮ್ಮ ವಿಶೇಷ ಧಿರಿಸು ಮತ್ತು ಟ್ರೈಸಿಕಲ್ನಿಂದಾಗಿ ದೂರದಿಂದಲೇ ಗುರುತು ಸಿಗುತ್ತಾರೆ.
ಸುವರ್ಣಸೌಧದಲ್ಲಿ ಕುಳಿತವರು ಮುಟ್ಠಾಳರು; ಎಂಇಎಸ್ ಬಗ್ಗೆ ಮಾತನಾಡದ ಶಾಸಕ – ಸಚಿವರು ರಣಹೇಡಿಗಳು; ನಾರಾಯಣಗೌಡ ಆಕ್ರೋಶ
2013ರಲ್ಲಿ ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ರನ್ನು ಭೇಟಿಯಾಗಲು ಮಾಡಿದ ಯತ್ನ ವಿಫಲವಾಗಿತ್ತೆಂದ ಅಮಿತ್, ಕಳೆದ ವರ್ಷ ಯೋಗಿ ಆದಿತ್ಯನಾಥರ ಭೇಟಿ ವೇಳೆ ತಮ್ಮ ಕನಸೊಂದು ಈಡೇರಿತು ಎಂದಿದ್ದಾರೆ. ಆಗಸ್ಟ್ 15ರಂದು ಮುಖ್ಯಮಂತ್ರಿಯಿಂದ ಅಮಿತ್ಗೆ ಟ್ರೈಸಿಕಲ್ ಉಡುಗೊರೆ ಸಿಕ್ಕಿದೆ. ಈ ಉಡುಗೊರೆ ಸಿಕ್ಕ ಬಳಿಕ ಅವರ ದೊಡ್ಡ ಅಭಿಮಾನಿಯಾಗಿರುವುದಾಗಿ 28 ವರ್ಷದ ಯುವಕ ತಿಳಿಸಿದ್ದಾರೆ.