ಶಾಲಾ ದಿನಗಳಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳ ಹವಾ ಬೇರೆಯದ್ದೇ ಮಟ್ಟದ್ದು. ತಲೆಮಾರುಗಳಿಂದಲೂ ’ಬ್ಯಾಕ್ಬೆಂಚರ್ಸ್’ ಪಟ್ಟದೊಂದಿಗೆ ಬೀಗುವ ಈ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ದೊಡ್ಡ ಹೆಸರುಗಳಾಗಿ ಬದಲಾದ ಅನೇಕ ನಿದರ್ಶನಗಳಿವೆ.
ಇಂಥ ಒಂದು ಚರ್ಚೆಯಲ್ಲಿ ಮಹಿಂದ್ರಾ & ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಭಾಗಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ದಿನದಂದು ಟ್ವಿಟರ್ನಲ್ಲಿ ತಮ್ಮ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ ಆನಂದ್ ಮಹಿಂದ್ರಾ. ನನ್ಹಿ ಕಾಲ್ಲಿ ಹೆಸರಿನ ಎನ್ಜಿಓ ಒಂದರ ಶಾಲೆಗೆ ಮರಳಿದ್ದಾಗ ಸೆರೆ ಹಿಡಿದ ತಮ್ಮ ಚಿತ್ರವನ್ನು ಆನಂದ್ ಹಂಚಿಕೊಂಡಿದ್ದಾರೆ.
1936 ಮಾಡೆಲ್ ವಿಮಾನದ ಒಳಾಂಗಣದ ಚಿತ್ರ ಹಂಚಿಕೊಂಡ ಆನಂದ್ ಮಹಿಂದ್ರಾ
“ವಯಸ್ಸಿನಲ್ಲಿ ಮಾತ್ರವಲ್ಲ ಹೃದಯಲ್ಲೂ ತಾರುಣ್ಯತೆಯನ್ನು ನಾವೆಲ್ಲಾ ಆಚರಿಸುತ್ತೇವೆ ಎಂದು ನಾನು ನಂಬಿದ್ದೇನೆ. ನಮ್ಮ ಸುತ್ತಲಿನ ಜಗತ್ತಿನಲ್ಲಿ ಫ್ರೆಶ್ ಮತ್ತು ತಾರುಣ್ಯಭರಿತ ನೋಟಗಳನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂಬುದು ನನ್ನ ನಂಬಿಕೆ. ಏಕೆಂದರೆ ನಮ್ಮ ನನ್ಹಿ ಕಾಲಿಸ್ನ ತರಗತಿ ಕೋಣೆಗಳಿಗೆ ಬೇಟಿ ಕೊಟ್ಟಾಗೆಲ್ಲಾ ನನ್ನ ಬ್ಯಾಟರಿಗಳು ರೀಚಾರ್ಜ್ ಆಗುತ್ತವೆ,” ಎಂದು ಹೇಳಿದ್ದಾರೆ ಮಹಿಂದ್ರಾ.
ಆ ವೇಳೆ, ಆನಂದ್ ಮಹಿಂದ್ರಾ ಹಿಂದಿನ ಬೆಂಚ್ನಲ್ಲಿ ಕುಳಿತ ವಿಚಾರವನ್ನು ನೆಟ್ಟಿಗರೊಬ್ಬರು ಗುರುತಿಸಿ, “ಬ್ಯಾಕ್ ಬೆಂಚರ್” ಎಂದು ಕಾಮೆಂಟ್ ಮಾಡಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಉದ್ಯಮಿ, “ಬ್ಯಾಕ್ ಬೆಂಚರ್ಗಳಿಗೆ ಯಾವಾಗಲೂ ತಮ್ಮ ತರಗತಿ ಮತ್ತು ಜಗತ್ತಿನ ಅತ್ಯಂತ ವಿಶಾಲವಾದ ದೃಷ್ಟಿ ಸಿಗುತ್ತದೆ,” ಎಂದಿದ್ದಾರೆ.
ಆನಂದ್ ಮಹಿಂದ್ರಾರ ಈ ಪ್ರತಿಕ್ರಿಯೆ ಮೀಮರ್ಗಳಿಗೆ ಸಿಕ್ಕು, ಈ ವಿಚಾರವಾಗಿ ವರ್ಣರಂಜಿತ ಸರಕುಗಳನ್ನು ಆನ್ಲೈನ್ನಲ್ಲಿ ಸೃಷ್ಟಿಸಿ ಶೇರ್ ಮಾಡಿದ್ದಾರೆ.
https://twitter.com/bhaiya_chulbul/status/1481243065256136706?ref_src=twsrc%5Etfw%7Ctwcamp%5Etweetembed%7Ctwterm%5E1481243065256136706%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fanand-mahindra-classroom-backbencher-netizens-thrilled-7719625%2F