alex Certify 20 ನಿಮಿಷ ಗಾಳಿಯಲ್ಲಿದ್ದರೆ ಕೊರೊನಾ ಶೇ.90 ರಷ್ಟು ದುರ್ಬಲ…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ನಿಮಿಷ ಗಾಳಿಯಲ್ಲಿದ್ದರೆ ಕೊರೊನಾ ಶೇ.90 ರಷ್ಟು ದುರ್ಬಲ…! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಾಣುವು ಗಾಳಿಯಲ್ಲಿ20 ನಿಮಿಷಗಳಿದ್ದರೆ ಸಾಕು, ತನ್ನ 90% ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ. ಸೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕಬೇಕು. ಇಲ್ಲವಾದಲ್ಲಿ ಸೋಂಕು ತೀವ್ರವಾಗಿಸುವ ಸಾಮರ್ಥ್ಯ‌ ಕುಂಠಿತವಾಗುತ್ತದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಬ್ರಿಟನ್ನಿನ ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಏರೊಸಾಲ್‌ ಸಂಶೋಧನಾ ಕೇಂದ್ರದಲ್ಲಿ ನಡೆದ ಮಹತ್ವದ ಸಂಶೋಧನೆಯ ವರದಿಯಲ್ಲಿ ಕೊರೊನಾ ವೈರಾಣುವಿನ ವರ್ತನೆಗಳ ಕುರಿತಾದ ವಿವರಗಳು ಬಹಿರಂಗಗೊಂಡಿದೆ.

ಶ್ವಾಸಕೋಶದಲ್ಲಿನೀರಿನಂಶದ ವಾತಾವರಣದಲ್ಲಿ ಜೀವಿಸುವ ವೈರಾಣು, ವ್ಯಕ್ತಿಯ ದೇಹದಿಂದ ಹೊರಕ್ಕೆ ಬಿದ್ದ ಕೂಡಲೇ ಇಂಗಾಲದ ಡೈ ಆಕ್ಸೈಡ್‌ನ ಪ್ರಭಾವದಿಂದ ತನ್ನ ಸಾಮರ್ಥ್ಯ‌ ಕಳೆದುಕೊಳ್ಳುತ್ತಾ ಹೋಗುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಿದಷ್ಟೂ ವೈರಾಣು ಸಾಮರ್ಥ್ಯ‌ ಕುಗ್ಗುವುದು ವೇಗವಾಗಲಿದೆ. 90% ನೀರಿನಂಶ ಇರುವ ವಾತಾವರಣದಲ್ಲಿ 5 ನಿಮಿಷಗಳಲ್ಲಿ ಕೊರೊನಾ ವೈರಾಣುವು ಶೇ.52ರಷ್ಟು ಸೋಂಕು ಉಂಟು ಮಾಡುವ ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ.

ಕೊರೋನಾ ಹೆಚ್ಚಳ ಹಿನ್ನೆಲೆ; ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ಗುಡ್ ನ್ಯೂಸ್

ಅಲ್ಲಿಗೆ ಬೇಸಿಗೆ ಅಥವಾ ಬಿಸಿಯಾದ ವಾತಾವರಣದಲ್ಲಿ ವೈರಾಣು ಸೋಂಕು ಶೀಘ್ರವಾಗಿ ಪ್ರಸರಿಸುತ್ತದೆ ಎಂಬ ವಾದ ತಪ್ಪಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸೋಂಕಿತರಿಂದ ಆದಷ್ಟು ಅಂತರ ಕಾಯ್ದುಕೊಂಡಷ್ಟು ಸುತ್ತಲಿನವರು ಕೊರೊನಾದಿಂದ ಬಚಾವಾಗಬಹುದು. ದೂರ ಹೆಚ್ಚಿದಷ್ಟೂ ವೈರಾಣುವು ಗಾಳಿಯಲ್ಲಿ ಪ್ರಸರಿಸಿಕೊಂಡು ಬರಲು ಹೆಚ್ಚು ಸಮಯ ತಗುಲಲಿದೆ. ಇದರಿಂದಾಗಿ ವೈರಾಣುವಿನ ಸೋಂಕು ತೀವ್ರಗೊಳಿಸುವ ಸಾಮರ್ಥ್ಯ‌ ಕುಂಠಿತವಾಗಲಿದೆ ಎಂದು ವಿಜ್ಞಾನಿ ಪ್ರೊ. ಜೊನಾಥನ್‌ ರೀಡ್‌ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...