ಕಾಕೋರಿ: ಇತ್ತೀಚೆಗಷ್ಟೇ ಪ್ರಸಿದ್ಧ ಕೇಶ ವಿನ್ಯಾಸಕ ಜಾವೇದ್ ಹಬೀಬ್ ಮಹಿಳೆಯೊಬ್ಬರ ತಲೆಗೂದಲ ಮೇಲೆ ಉಗುಳಿ ವಿವಾದಕ್ಕೆ ಕಾರಣರಾಗಿದ್ದು ಬಹುಶಃ ನಿಮಗೆ ತಿಳಿದಿರಬಹುದು. ಇದೀಗ ಡಾಬಾದಲ್ಲಿ ಅಡುಗೆಯವರು ರೊಟ್ಟಿ ಮಾಡುವ ಹಿಟ್ಟಿಗೆ ಉಗುಳಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರನ್ನು ಬಂಧಿಸಲಾಗಿದೆ.
ಯುಪಿಯ ಲಕ್ನೋದ ಹೊರವಲಯದಲ್ಲಿರುವ ಕಾಕೋರಿಯ ರಸ್ತೆ ಬದಿಯ ಡಾಬಾದಲ್ಲಿ ರೊಟ್ಟಿ ಹಿಟ್ಟನ್ನು ತಯಾರಿಸಬೇಕಾದ್ರೆ ಅಡುಗೆಯವರು ಹಿಟ್ಟಿಗೆ ಉಗುಳಿದ್ದಾರೆ. ಪ್ರಕರಣ ಸಂಬಂಧ ಐವರು ಸಹಾಯಕರಾದ ದಾನಿಶ್, ಹಫೀಜ್, ಮುಖ್ತಾರ್, ಫಿರೋಜ್ ಮತ್ತು ಅನ್ವರ್ ನನ್ನು ಜೊತೆಗೆ ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಆರಕ್ಷಕರು ಸೂಕ್ತ ಕ್ರಮ ತೆಗೆದುಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ. ಅಡುಗೆಯವರೊಂದಿಗೆ ಡಾಬಾ ಮಾಲೀಕ ಯಾಕೂಬ್‌ನನ್ನು ಕೂಡ ಬಂಧಿಸಲಾಗಿದೆ.
ರೋಗ ಅಥವಾ ಸೋಂಕು ಹರಡುವ ಸಾಧ್ಯತೆ ಬಗ್ಗೆ ನಿರ್ಲಕ್ಷ್ಯ ಮತ್ತು ಸೋಂಕು ಹರಡುವ ಮಾರಣಾಂತಿಕ ಕೃತ್ಯಕ್ಕಾಗಿ ಸಾಂಕ್ರಾಮಿಕ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಿಸಿದ್ದಾರೆ. ಈ ವಿಡಿಯೋವನ್ನು ಸುಶೀಲ್ ರಜಪೂತ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ವಿಡಿಯೋವನ್ನು ದೂರದಿಂದ ಚಿತ್ರೀಕರಿಸಲಾಗಿದ್ದು, ಅಡುಗೆಯವರು ನಿಜವಾಗಿಯೂ ಉಗುಳುತ್ತಿದ್ದಾರೋ ಇಲ್ಲವೋ ಎಂಬುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಆರೋಪವನ್ನು ಪತ್ತೆಹಚ್ಚಲು ಪೊಲೀಸರು ತಾಂತ್ರಿಕ ನೆರವು ಪಡೆಯಲಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಮೀರತ್‌ನಲ್ಲಿ ನೌಶಾದ್ ಎಂಬ ವ್ಯಕ್ತಿ ಬ್ರೆಡ್ ಮಾಡುವ ಹಿಟ್ಟಿನ ಮೇಲೆ ಉಗುಳುವ ವಿಡಿಯೋ ವೈರಲ್ ಆಗಿತ್ತು. 10-15 ವರ್ಷಗಳಿಂದ ರೊಟ್ಟಿ ತಯಾರಿಸುತ್ತಿದ್ದು, ಮೊದಲಿನಿಂದಲೂ ಈ ರೀತಿ ಉಗುಳುತ್ತಿದ್ದುದಾಗಿ ಆತ ಪೊಲೀಸರಿಗೆ ತಿಳಿಸಿದ್ದ.