ಚಳಿಗಾಲದಲ್ಲಿ ತಾಪಮಾನವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದರಿಂದ ಮನೆಯಲ್ಲಿರುವ ಸಿಲಿಂಡರ್ ನಲ್ಲಿ ಗ್ಯಾಸ್ ಫ್ರೀಜ್ ಆಗುತ್ತದೆ. ಇದರಿಂದ ಗ್ಯಾಸ್ ಉರಿಯುವುದಿಲ್ಲ. ಇಂತಹ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಅದನ್ನು ಸರಿಪಡಿಸಲು ಈ ಸಲಹೆ ಪಾಲಿಸಿ.
ಚಳಿಯಿಂದ ಗ್ಯಾಸ್ ಫ್ರೀಜ್ ಆಗಿದ್ದರೆ ಬಿಸಿ ನೀರನ್ನು ಬಳಸಿ. ಅದಕ್ಕಾಗಿ 4 ಲೀಟರ್ ಬಿಸಿ ನೀರನ್ನು ದೊಡ್ಡ ಪಾತ್ರೆಗೆ ಹಾಕಿ ಅದರಲ್ಲಿ ಸಿಲಿಂಡರ್ ಅನ್ನು ಹಾಕಿ. ಅದರ ಸುತ್ತಲೂ ನೀರು ಹಾಕಿ. ಆಗ ಹೆಪ್ಪುಗಟ್ಟಿದ ಗ್ಯಾಸ್ ಅನಿಲ ರೂಪಕ್ಕೆ ಬರುತ್ತದೆ.
ಚಳಿಗಾಲದಲ್ಲಿ ಗ್ಯಾಸ್ ಫ್ರೀಜ್ ಆಗದಂತೆ ತಡೆಯಲು ಸಿಲಿಂಡರ್ ಅನ್ನು ಗೋಣಿ ಚೀಲದಲ್ಲಿ ಕಟ್ಟಿ ಇಡಿ. 2-3 ಗೋಣಿಚೀಲದಲ್ಲಿ ಸಿಲಿಂಡರ್ ಅನ್ನು ಸುತ್ತಿಡಿ. ಇದರಿಂದ ಗ್ಯಾಸ್ ಫ್ರಿಜ್ ಆಗುವುದಿಲ್ಲ.
ನೆಲದ ಮೇಲೆ ಸಿಲಿಂಡರ್ ಇಡುವುದರಿಂದ ಗ್ಯಾಸ್ ಫ್ರಿಜ್ ಆಗುತ್ತದೆ. ಹಾಗಾಗಿ ಸಿಲಿಂಡರ್ ಅನ್ನು ನೆಲದ ಮೇಲೆ ಇಡದೆ ಅದರ ಕೆಳಗೆ ಬಟ್ಟೆಗಳನ್ನು ಇಡಿ ಅಥವಾ ಸಿಲಿಂಡರ್ ಟ್ರಾಲಿಯನ್ನು ಬಳಸಬಹುದು.
ಹಾಗೇ ಗ್ಯಾಸ್ ಫ್ರೀಜ್ ಆಗುವುದನ್ನು ತಡೆಯಲು ನೀವು ಸೂರ್ಯ ಬಿಸಿಲಿನಲ್ಲಿ ಸಿಲಿಂಡರ್ ಅನ್ನು ಇಡಬಹುದು. ಇದರಿಂದ ಗ್ಯಾಸ್ ಅನಿಲ ರೂಪಕ್ಕೆ ಬರುತ್ತದೆ.