alex Certify SFJ ಯಿಂದ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ; ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿಗೆ ತಡೆಯೊಡ್ಡುವವರಿಗೆ ಬಹುಮಾನ ಘೋಷಿಸಿದ ಉಗ್ರ ಸಂಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SFJ ಯಿಂದ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ; ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿಗೆ ತಡೆಯೊಡ್ಡುವವರಿಗೆ ಬಹುಮಾನ ಘೋಷಿಸಿದ ಉಗ್ರ ಸಂಘಟನೆ

ಖಲಿಸ್ತಾನಿ ಭಯೋತ್ಪಾದಕ ಗುಂಪಾದ ಸಿಖ್ಸ್​ ಫಾರ್​ ಜಸ್ಟೀಸ್​ ಮತ್ತೊಮ್ಮೆ ದೇಶದ ಗಣರಾಜ್ಯೋತ್ಸವ ಆಚರಣೆಯನ್ನು ಗುರಿಯಾಗಿಸಿದೆ. ತನ್ನ ಸಂಘಟನೆಯ ಬೆಂಬಲಿಗರ ಬಳಿ ಪ್ರಧಾನಿ ಮೋದಿಗೆ ತಡೆ ನೀಡುವಂತೆ ಹಾಗೂ ಜನವರಿ 26ರಂದು ರಾಷ್ಟ್ರ ರಾಜಧಾನಿಯಲ್ಲಿ ತ್ರಿವರ್ಣ ಧ್ವಜಾರೋಹಣವನ್ನು ತಡೆಯುವಂತೆ ನಿರ್ದೇಶನ ನೀಡಿದೆ ಎನ್ನಲಾಗಿದೆ. ತೀವ್ರಗಾಮಿ ಖಲಿಸ್ತಾನಿ ಸಂಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿ ಕದಡಲು ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ.

ಎಸ್ಎಫ್​ಜೆ ಮುಖ್ಯಸ್ಥ ಗುರುಪತ್​ವಂತ್​ ಸಿಂಗ್​ ಫೇಸ್​ಬುಕ್​ನಲ್ಲಿ ಶೇರ್​ ಮಾಡಿರುವ ವಿಡಿಯೋದಲ್ಲಿ ಈ ನಿಷೇಧಿತ ಸಂಘಟನೆಯು ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ತ್ರಿವರ್ಣಧ್ವಜದ ಬದಲು ಖಲಿಸ್ತಾನಿ ಧ್ವಜವನ್ನು ಹಾರಿಸುವ ಯಾವುದೇ ವ್ಯಕ್ತಿಗೆ 1 ಮಿಲಿಯನ್ ಡಾಲರ್​ನ್ನು ಬಹುಮಾನ ರೂಪದಲ್ಲಿ ನೀಡುವುದಾಗಿ ಘೋಷಣೆ ಮಾಡಿದೆ.

ಇದು ಸಿಖ್​ ಮತ್ತು ಹಿಂದೂಗಳ ವಿಚಾರ. ಈ ಬಾರಿ ದೆಹಲಿಯಲ್ಲಿ ತ್ರಿವರ್ಣ ಧ್ವಜ ಹಾರಲು ನಾವು ಬಿಡುವುದಿಲ್ಲ. ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹಣೆ ಭಾರತದ ಆಕ್ರಮಣದಿಂದ ಪಂಜಾಬ್​ನ್ನು ವಿಮೋಚನೆಗೊಳಿಸುವ ಅಭಿಯಾನವು 2022ರ ವಿಧಾನಸಭಾ ಚುನಾವಣೆಗೆ ಸಮನಾಗಿ ಮುಂದುವರಿಯಲಿದೆ ಎಂದು ಪನ್ನು ಹೇಳಿದ್ದಾನೆ. ಅಲ್ಲದೇ ಈ ವಿಡಿಯೋದಲ್ಲಿ ತ್ರಿವರ್ಣ ಧ್ಚಜವನ್ನು ಸುಡುವುದನ್ನೂ ಕಾಣಬಹುದಾಗಿದೆ.

ಕಳೆದ ವರ್ಷ ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್​ನಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸಿದರೆ 2,50,000 ಡಾಲರ್ ಹಣವನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿತ್ತು. ಅಲ್ಲದೇ ಇದು ರೈತರ ಪ್ರತಿಭಟನೆಯನ್ನು ಹೈಜಾಕ್​ ಮಾಡಿತ್ತು. ರಾಷ್ಟ್ರೀಯ ರಜಾದಿನಗಳಂದು ದೇಶ ವಿರೋಧಿ ಚಟುವಟಿಕೆ ನಡೆಸಲು ಬೆಂಬಲಿಗರನ್ನು ಪ್ರಚೋದಿಸುವ ಕೆಲಸವನ್ನು ಇದು ಮಾಡುತ್ತದೆ.

ಕಳೆದ ವರ್ಷ ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜವನ್ನು ಹಾರಿಸಿದ್ದಕ್ಕಾಗಿ SFJ, USD 2,50,000 ನಗದು ಬಹುಮಾನವನ್ನು ಘೋಷಿಸಿದಾಗ ಭಾರತದಲ್ಲಿ ಸಿಖ್ಖರನ್ನು ಪ್ರಚೋದಿಸಲು ಇದೇ ರೀತಿಯ ಪ್ರಯತ್ನವನ್ನು ಮಾಡಲಾಯಿತು. ಇದು ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡಿತು, ರಾಷ್ಟ್ರೀಯ ರಜಾದಿನಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳುತ್ತದೆ. ಅಲ್ಲದೇ ಪಂಜಾಬ್‌ ನಲ್ಲಿ ಪ್ರಧಾನಿ ಮೋದಿಯವರ ವಾಹನ ತಡೆಯಲು ತಾನೇ ಕಾರಣವೆಂದು ಈ ಸಂಘಟನೆ ಹೇಳಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...