ಕ್ಷುಲ್ಲಕ ಕಾರಣಕ್ಕೆ ಬೀದಿಬದಿ ವ್ಯಾಪಾರಿಗೆ ಇನ್ನಿಲ್ಲದ ಕಷ್ಟ ನೀಡಿದ ಮಹಿಳೆ 12-01-2022 4:25PM IST / No Comments / Posted In: Latest News, India, Live News ಆಕ್ರೋಶಗೊಂಡಿದ್ದ ಮಹಿಳೆಯೊಬ್ಬರು ಬೀದಿ ಬದಿ ವ್ಯಾಪಾರಿಯ ತಳ್ಳುವ ಗಾಡಿಯಲ್ಲಿದ್ದ ಹಣ್ಣುಗಳನ್ನು ರಸ್ತೆಗೆ ಎಸೆದಿದ್ದು ಈ ಅಮಾನವೀಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭೋಪಾಲ್ನ ಜಿಲ್ಲಾಡಳಿತ ಘಟನೆ ಸಂಬಂಧ ತನಿಖೆಗೆ ಮುಂದಾಗಿದೆ. ವಿಡಿಯೋದಲ್ಲಿ ಕೋಪಗೊಂಡಿರುವ ಮಹಿಳೆಯು ವ್ಯಾಪಾರಿಗೆ ಬಯ್ಯುತ್ತಿದ್ದಾರೆ ಹಾಗೂ ತನ್ನ ಕಾರಿನತ್ತ ಕೈ ಮಾಡುತ್ತಾ ಆತನ ಗಾಡಿಯಲ್ಲಿದ್ದ ಹಣ್ಣುಗಳನ್ನು ಒಂದೊಂದಾಗಿಯೇ ರಸ್ತೆಗೆ ಎಸೆದಿದ್ದಾರೆ. ಈ ವೇಳೆಯಲ್ಲಿ ವ್ಯಾಪಾರಿಯು ಮೇಡಂ ದಯವಿಟ್ಟು ಈ ರೀತಿ ಮಾಡಬೇಡಿ. ನಾನು ಬಡವ ಎಂದು ಹೇಳುತ್ತಿರೋದನ್ನು ಕೇಳಬಹುದಾಗಿದೆ. ನಿಮ್ಮ ಕಾರಿಗೆ ಆದ ಹಾನಿಯನ್ನು ನಾನು ತುಂಬಿಕೊಡುತ್ತೇನೆ ಎಂದು ವ್ಯಾಪಾರಿಯು ಪರಿ ಪರಿಯಾಗಿ ಬೇಡಿಕೊಂಡರೂ ಸಹ ಕೇಳದ ಮಹಿಳೆಯು ಈ ರೀತಿ ರಾದ್ಧಾಂತ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು ಮಹಿಳೆಯ ವರ್ತನೆಯ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ದುರ್ವರ್ತನೆ ತೋರಿದ ಮಹಿಳೆಯನ್ನು ಪೊಲೀಸರು ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಭೋಪಾಲ್ ಜಿಲ್ಲಾಧಿಕಾರಿ ಅವಿನಾಶ್ ಲಾವಣಿಯಾ ಈ ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ. ಭೋಪಾಲ್ನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯು ವ್ಯಾಪಾರಿಯ ಗಾಡಿಯಲ್ಲಿದ್ದ ಹಣ್ಣುಗಳನ್ನು ಎಸೆಯುತ್ತಿದ್ದಾಳೆ. ಮಹಿಳೆಯನ್ನು ಗುರುತಿಸಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ ಎಂದು ಅವಿನಾಶ್ ಟ್ವೀಟಾಯಿಸಿದ್ದಾರೆ. Bhopal : After a slight touch of a car parked on the road, the woman in anger threw all the fruits of the fruit seller on the road. It is said that a professor of a private university in Bhopal, madam. The cartman kept pleading but madam did not listen.#Bhopal #MadhyaPradesh pic.twitter.com/cAFvPL7LRN — Mario David Antony Alapatt (@davidalapatt) January 11, 2022