alex Certify ಕೇವಲ 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ 17ರ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ 17ರ ಯುವತಿ..!

17 ವರ್ಷದ ಯುವತಿಯು ಅವಧಿಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದು ಈ ಮಗುವನ್ನು ಬ್ರಿಟನ್​ನಲ್ಲಿ ಕಳೆದ 20 ವರ್ಷಗಳಲ್ಲಿ ಜನಿಸಿದ ಅತ್ಯಂತ ಪುಟ್ಟ ಮಗು ಎಂದು ಅಂದಾಜಿಸಲಾಗಿದೆ.

25 ವಾರಗಳ ಗರ್ಭಿಣಿಯಾಗಿದ್ದ 17 ವರ್ಷದ ಎಲ್ಲಿ ಪ್ಯಾಟೋನ್​ ಎಂಬವರು ಸಿ ಸೆಕ್ಷನ್​ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಈ ನವಜಾತ ಶಿಶುವು ಕೇವಲ 325 ಗ್ರಾಂ ತೂಕವನ್ನು ಹೊಂದಿದ್ದು ಬದುಕುವ ಚಾನ್ಸ್​ ಕೇವಲ 20 ಪ್ರತಿಶತವಿದೆ ಎಂದು ವೈದ್ಯರು ಹೇಳಿದ್ದರು. ಆದರೆ ಮಗು ಹನ್ನಾ ಎಲ್ಲಾ ಕಷ್ಟಗಳನ್ನು ಎದುರಿಸಿ ಸಾವಿನ ದವಡೆಯಿಂದ ಪಾರಾಗಿದೆ.

ಪ್ಯಾಟೋನ್​ ಹಾಗೂ ಅವರ ಸಂಗಾತಿ ಬ್ರ್ಯಾಂಡೋನ್​ ಸ್ಟಿಬಲ್ಸ್​ರಿಗೆ 22ನೇ ವಾರದ ಸ್ಕ್ಯಾನಿಂಗ್​ ಅವಧಿಯಲ್ಲಿ ನಿಮ್ಮ ಮಗು ತುಂಬಾನೇ ಚಿಕ್ಕದಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದರು. 22ನೇ ವಾರದ ಸ್ಕ್ಯಾನಿಂಗ್​ ವೇಳೆಯಲ್ಲಿ ಮಗು 16 ವಾರದ ಗರ್ಭದಂತೆ ಕಾಣುತ್ತಿತ್ತು. ಡಿಸೆಂಬರ್​ 29ರಂದು ಯುವತಿಗೆ ಹೊಟ್ಟೆ ಹಾಗೂ ಎದೆ ನೋವು ಕಾಣಿಸಿಕೊಂಡಿದೆ.

ಗರ್ಭಿಣಿಯನ್ನು ಗ್ಲ್ಯಾಸ್ಗೋದ ಕ್ವೀನ್​ ಎಲಿಜಬೆತ್​​ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಡಿಸೆಂಬರ್​ 30ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಪ್ಯಾಟೋನ್​ಗೆ ಒಮ್ಮೆ ಮಾತ್ರ ಮಗುವನ್ನು ಎತ್ತಿಕೊಳ್ಳಲು ಅವಕಾಶ ನೀಡಲಾಗಿತ್ತು. ಹಾಗೂ ಬ್ರ್ಯಾಂಡೋನ್​ ಒಮ್ಮೆ ತಮ್ಮ ಮಗುವಿಗೆ ಡೈಪರ್​ ಬದಲಾಯಿಸಿದ್ದರು.

ಏಪ್ರಿಲ್​ 13ರವರೆಗೆ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ಯುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗು ಜನಿಸಿದಾಗಿನಿಂದ ಇಲ್ಲಿಯವರೆಗೆ ಅದು 25 ಗ್ರಾಂ ತೂಕ ಹೆಚ್ಚಿಸಿಕೊಂಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...