ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ವೈರಲ್ ಸಂದೇಶದ ಅಸಲಿಯತ್ತನ್ನ ಬಯಲು ಮಾಡಿದೆ. ಈ ಸಂದೇಶದ ಮಾಹಿತಿ ತಿಳಿದ ಮೇಲೆ ಪಿಐಬಿ ಈ ವಿಚಾರವನ್ನು ಪರಿಶೀಲಿಸಿದೆ, ಜೊತೆಗೆ ಈ ಸಂದೇಶವು ಸಂಪೂರ್ಣವಾಗಿ ನಕಲಿ ಎಂದು ವರದಿ ಮಾಡಿದೆ. ಈ ಬಗ್ಗೆ ಪಿಐಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಭಾರತ ಸರ್ಕಾರದ ಆರೋಗ್ಯ ಸಚಿವಾಲಯದಿಂದ ಕೋವಿಡ್-19 ನಿಧಿಯ ಅಡಿಯಲ್ಲಿ 5,000 ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದು ವೈರಲ್ ಆಗುತ್ತಿರುವ ಸಂದೇಶ ಸಂಪೂರ್ಣ ನಕಲಿ ಎಂದು ಪಿಐಬಿ ಸ್ಪಷ್ಟಪಡಿಸಿದೆ. ಕೊರೊನಾ ನಿಧಿಯ ಅಡಿಯಲ್ಲಿ ಆರೋಗ್ಯ ಸಚಿವಾಲಯ ಯಾವುದೇ ಹಣವನ್ನು ನೀಡುತ್ತಿಲ್ಲ. ಇಂತಹ ನಕಲಿ ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ, ಈ ನಕಲಿ ವೆಬ್ಸೈಟ್ಗಳಲ್ಲಿ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಪಿಐಬಿ ಟ್ವೀಟ್ ಮಾಡಿದೆ.
ಇಂತಹ ಸಂದೇಶಗಳನ್ನು ಪರಿಶೀಲಿಸುವುದು ಹೇಗೆ..?
ನಿಮಗೂ ಸಹ ಈ ರೀತಿಯ ಸಂದೇಶ ಬಂದರೆ, ಅಥವಾ ಯಾರಾದರು ಫಾರ್ವರ್ಡ್ ಮಾಡಿದರೆ. ಅಂತಹ ಸಂದೇಶಗಳ ಸತ್ಯಾಸತ್ಯತೆಯನ್ನ ಕಂಡುಹಿಡಿಯಲು ಪಿಐಬಿ ನಿಮಗೆ ಸಹಾಯ ಮಾಡುತ್ತದೆ. ನೀವು ಪಿಐಬಿಯ ಅಧಿಕೃತ ಫ್ಯಾಕ್ಟ್ ಚೆಕ್ ಲಿಂಕ್ (https://factcheck.pib.gov.in/ )ಗೆ ಭೇಟಿ ನೀಡಬಹುದು ಅಥವಾ ನಿಮಗೆ ಬಂದ ಸಂದೇಶಗಳನ್ನ ಪಿಐಬಿಯ ವಾಟ್ಸಾಪ್ ಸಂಖ್ಯೆ(+918799711259)ಗೆ ಕಳುಹಿಸಬಹುದು. ಅಲ್ಲದೆ pibfactcheck@gmail.com ಗೆ ಇಮೇಲ್ ಸಹ ಮಾಡಬಹುದು.