alex Certify ಓಮಿಕ್ರಾನ್​ ಬಳಿಕ ಕೊರೊನಾ ಸಾಂಕ್ರಾಮಿಕಕ್ಕೆ ಮುಕ್ತಿ..? ತಜ್ಞರಿಂದ ಬಂತು ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಮಿಕ್ರಾನ್​ ಬಳಿಕ ಕೊರೊನಾ ಸಾಂಕ್ರಾಮಿಕಕ್ಕೆ ಮುಕ್ತಿ..? ತಜ್ಞರಿಂದ ಬಂತು ಬಹುಮುಖ್ಯ ಮಾಹಿತಿ

ಓಮಿಕ್ರಾನ್​ ರೂಪಾಂತರಿಯ ಹರಡುವಿಕೆಯು ಕೋವಿಡ್​ ಸೋಂಕನ್ನು ಸ್ಥಳೀಯ ಕಾಯಿಲೆಯನ್ನಾಗಿ ಮಾಡುತ್ತಿದೆ. ಆದರೂ ಇದು ಸದ್ಯಕ್ಕೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿಯೇ ಉಳಿದಿದೆ ಎಂದು ಇಯುನ ಡ್ರಗ್​ ವಾಚ್​ಡಾಗ್​​ ಹೇಳಿದೆ. ಯುರೋಪಿಯನ್​ ಮೆಡಿಸಿನ್ಸ್​​ ಏಜೆನ್ಸಿ ಜನತೆಗೆ ನಾಲ್ಕನೇ ಡೋಸ್​ ಲಸಿಕೆ ನೀಡುವ ವಿಚಾರದಲ್ಲಿ ಸಂದೇಹ ವ್ಯಕ್ತಪಡಿಸಿದೆ. ಬೂಸ್ಟರ್​ ಡೋಸ್​ಗಳನ್ನು ಪುನರಾವರ್ತಿಸುವುದು ಕೊರೊನಾ ತಡೆಗಟ್ಟಲು ಸಮರ್ಥನೀಯ ತಂತ್ರವಲ್ಲ ಎಂದು ಹೇಳಿದೆ.

ಈ ವಿಚಾರವಾಗಿ ಮಾತನಾಡಿದ ಲಸಿಕೆ ಕಾರ್ಯತಂತ್ರದ ಮುಖ್ಯಸ್ಥ ಮಾರ್ಕೊ ಕ್ಯಾವೆಲರಿ ನಾವು ಸುರಂಗದ ಕೊನೆಗೆ ಯಾವಾಗ ಬರುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಕೊರೊನಾ ಲಸಿಕೆಗಳ ಪ್ರಭಾವ, ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳ, ಓಮಿಕ್ರಾನ್​​ ಸೇರಿದಂತೆ ಸಾಕಷ್ಟು ಕಾರಣಗಳಿಂದಾಗಿ ನಾವು ಕೊರೊನಾ ಒಂದು ಸ್ಥಳೀಯ ಕಾಯಿಲೆಯಾಗಿ ಮಾರ್ಪಡುವ ಪರಿಸ್ಥಿತಿಯನ್ನು ಸಮೀಪಿಸುತ್ತಿದ್ದೇವೆ ಎಂದು ಹೇಳಿದರು.

ಆದರೆ ಓಮಿಕ್ರಾನ್​ ಸೋಂಕು ಹರಡುತ್ತಿರುವ ವೇಗ ಆರೋಗ್ಯ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತವನ್ನೇ ನೀಡುತ್ತಿದೆ. ನಾವು ಇನ್ನೂ ಸಾಂಕ್ರಾಮಿಕ ರೋಗದ ಜೊತೆಯಲ್ಲೇ ಇದ್ದೇವೆ ಎಂಬುದನ್ನು ಮರೆಯುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...