ಅಸಭ್ಯ ಜೋಕ್ ಗಾಗಿ ಸೈನಾ ನೆಹ್ವಾಲ್ ಗೆ ಕ್ಷಮೆಯಾಚಿಸುವ ಪತ್ರ ಬರೆದ ನಟ ಸಿದ್ಧಾರ್ಥ್, ಮಹಿಳೆಯಾಗಿ ನಿಮ್ಮ ಮೇಲೆ ದಾಳಿ ಮಾಡುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಅವರ ಬಗ್ಗೆ ನಟ ಸಿದ್ಧಾರ್ಥ್ ಮಂಗಳವಾರ ಟ್ವಿಟ್ಟರ್ನಲ್ಲಿ ಮಾಡಿದ ಅಸಭ್ಯ ಹಾಸ್ಯ ಮಾಡಿದ್ದಕ್ಕಾಗಿ ಭಾರಿ ವಿರೋಧ ವ್ಯಕ್ತವಾದ ನಂತರ ಸೈನಾ ನೆಹ್ವಾಲ್ ಗೆ ಕ್ಷಮೆಯಾಚಿಸಿದ್ದಾರೆ.
ಪಂಜಾಬ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯ ಲೋಪವನ್ನು ಕುರಿತು ಸೈನಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧಾರ್ಥ್ ಅವರ ಟ್ವೀಟ್ ನೆಟಿಜನ್ ಗಳನ್ನು ಕೆರಳಿಸಿತ್ತು.
ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಕ್ಷಮೆಯಾಚನೆಯ ಪತ್ರದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ,
ಪ್ರಿಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಅನೇಕ ವಿಷಯಗಳಲ್ಲಿ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ನಿಮ್ಮ ಟ್ವೀಟ್ ಅನ್ನು ನಾನು ಓದಿದಾಗ ನನ್ನ ನಿರಾಶೆ ಅಥವಾ ಕೋಪವೂ ಸಹ ನನ್ನ ಧ್ವನಿ ಮತ್ತು ಮಾತುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಅದು ಒಳ್ಳೆಯ ಜೋಕ್ ಅಲ್ಲ, ನನ್ನ ಪದಪ್ರಯೋಗ ಮತ್ತು ಹಾಸ್ಯವು ಯಾವುದೇ ದುರುದ್ದೇಶಪೂರಿತ ಉದ್ದೇಶವನ್ನು ಹೊಂದಿಲ್ಲ ಎಂದು ಜನರು ಆರೋಪಿಸಿದ್ದಾರೆ. ನಾನು ನಿಷ್ಠಾವಂತ ಸ್ತ್ರೀವಾದಿ ಮಿತ್ರನಾಗಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಟ್ವೀಟ್ನಲ್ಲಿ ಯಾವುದೇ ಲಿಂಗವನ್ನು ಸೂಚಿಸಲಾಗಿಲ್ಲ ಮತ್ತು ಖಂಡಿತವಾಗಿಯೂ ಮಹಿಳೆಯಾಗಿ ನಿಮ್ಮ ಮೇಲೆ ದಾಳಿ ಮಾಡುವ ಉದ್ದೇಶವಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸೈನಾ ನೆಹ್ವಾಲ್ ವಿರುದ್ಧ ಅಶ್ಲೀಲ ಮತ್ತು ಅನುಚಿತ ಟ್ವೀಟ್ಗಾಗಿ ಸಿದ್ಧಾರ್ಥ್ ಅವರ ಖಾತೆಯನ್ನು ನಿರ್ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಟ್ವಿಟರ್ ಗೆ ತಿಳಿಸಿದೆ. ಸಿದ್ಧಾರ್ಥ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ಪತ್ರ ಬರೆದಿದೆ.
ಎನ್ಸಿಡಬ್ಲ್ಯು ಈ ಕಾಮೆಂಟ್ ಸ್ತ್ರೀದ್ವೇಷವಾದಿ, ಮಹಿಳೆಯರ ಘನತೆಗೆ ಅಗೌರವ ಮತ್ತು ಅವಮಾನವಾಗಿದೆ ಎಂದು ಹೇಳಿದೆ. ಆಯೋಗವು ನಟನಿಂದ ಮಾಡಿದ ಇಂತಹ ಅಶ್ಲೀಲ ಮತ್ತು ಅನುಚಿತ ಹೇಳಿಕೆ ಖಂಡಿಸುತ್ತದೆ ಮತ್ತು ಈ ವಿಷಯದಲ್ಲಿ ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡಿದೆ ಎಂದು ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದು, ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದು, ಈ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು ಮತ್ತು ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ಸಮಿತಿಯು ಅವರ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಜರುಗಿಸಬೇಕೆಂದು ತಿಳಿಸಿದ್ದಾರೆ.
https://twitter.com/Actor_Siddharth/status/1480962679032324097