ಕಂಪನಿಯೊಂದು ತನ್ನ ಗುರುತನ್ನು ಕದ್ದಿದ್ದಲ್ಲದೆ, ಒಪ್ಪಿಗೆಯಿಲ್ಲದೆ ತನ್ನ ಮುಖವನ್ನು ಸೆಕ್ಸ್ ಗೊಂಬೆಗಳನ್ನು ತಯಾರಿಸಲು ಬಳಸಿಕೊಂಡಿರುವುದನ್ನು ತಿಳಿದ ಮಾಡೆಲ್ ಆಘಾತ ಹಾಗೂ ಕೋಪ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ನ ಜನಪ್ರಿಯ ಇನ್ಸ್ಟಾಗ್ರಾಮ್ ಮಾಡೆಲ್ ಆಗಿರುವ ಯೆಲ್ ಕೊಹೆನ್ ಎರಿಸ್ ಅವರ ಮುಖವನ್ನು ಹೋಲುವಂತೆ ಸೆಕ್ಸ್ ಗೊಂಬೆ ತಯಾರಿಸಲಾಗಿದೆ. ಈ ಬಗ್ಗೆ ತಮ್ಮ ಅನುಯಾಯಿಗಳಿಂದ ತಿಳಿದ ಅವರು ಆಕ್ರೋಶ ಹೊರಹಾಕಿದ್ದಾರೆ.
ವರದಿಗಳ ಪ್ರಕಾರ, ಈ ಗೊಂಬೆಯನ್ನು ಚೀನಾದ ಡಾಲ್ ಸ್ಟುಡಿಯೋ ಎಂಬ ಕಂಪನಿ ತಯಾರಿಸಿದೆ. ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದ ಫೋಟೋಗಳಿಂದ ತನ್ನ ಮುಖದ ಹೋಲಿಕೆಯನ್ನು ಬಳಸಿಕೊಂಡಿದೆ. ಅಲ್ಲದೆ ಆಕೆಯ ಹೆಸರನ್ನು ಸಹ ನೀಡಲಾಗಿದೆಯಂತೆ. ಇನ್ಸ್ಟಾಗ್ರಾಮ್ನಿಂದ ತನ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಕಂಪನಿಯು ಉತ್ಪನ್ನವನ್ನು ಪ್ರಚಾರ ಮಾಡುತ್ತಿದೆ ಎಂದು ಎರಿಸ್ ಆರೋಪಿಸಿದ್ದಾರೆ.
ಈ ಸಂಬಂಧ ಸುದ್ದಿ ವಾಹಿನಿ ಜೊತೆ ಎರಿಸ್ ಮಾಹಿತಿ ಹಂಚಿಕೊಂಡಿದ್ದಾರೆ. ಮಾಡೆಲ್ ಸೆಕ್ಸ್ ಗೊಂಬೆ ಉದ್ಯಮಕ್ಕೆ ವಿರುದ್ಧವಾಗಿಲ್ಲ. ಆದರೆ ಒಪ್ಪಿಗೆ ಪಡೆಯದೇ ಹಾಗೂ ಅರಿವಿಗೆ ಬಾರದೆಯೇ ಅವರು ಮಾಡೆಲ್ ಮುಖಚರ್ಯೆ ಹೋಲುವ ಸೆಕ್ಸ್ ಟಾಯ್ ತಯಾರಿಸಿದ್ದು ಅವರನ್ನು ಕುಪಿತಗೊಳಿಸಿದೆ. ಹೀಗಾಗಿ ಎರಿಸ್ ಕಂಪನಿ ವಿರುದ್ಧ ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ.