alex Certify ಐಪಿಎಸ್ ತಂದೆಗೆ ಲಿಪ್‌ಸ್ಟಿಕ್ ಹಚ್ಚಿದ ಪುಟ್ಟ ಬಾಲೆ: ನೆಟ್ಟಿಗರ ಹೃದಯ ಗೆದ್ದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಸ್ ತಂದೆಗೆ ಲಿಪ್‌ಸ್ಟಿಕ್ ಹಚ್ಚಿದ ಪುಟ್ಟ ಬಾಲೆ: ನೆಟ್ಟಿಗರ ಹೃದಯ ಗೆದ್ದ ವಿಡಿಯೋ

ಹೆಣ್ಣು ಮಗುವನ್ನು ಹೆತ್ತ ಪೋಷಕರು ನಿಜವಾಗಿಯೂ ಪುಣ್ಯವಂತರು ಅನ್ನೋ ಮಾತಿದೆ. ಮಗಳೆಂದರೆ ಪ್ರತಿಯೊಬ್ಬ ತಂದೆಗೆ ಎಷ್ಟು ಪ್ರೀತಿಯಿದೆಯೋ, ಹೆಣ್ಣುಮಕ್ಕಳ ಪ್ರಪಂಚವೇ ಅಪ್ಪ. ಮಗಳೆಂದರೆ ಸಂತೋಷ, ವಾತ್ಸಲ್ಯದ ಪ್ರತಿರೂಪ, ಬದುಕಿನ ನೆಮ್ಮದಿ. ಅಂದಹಾಗೆ ನಾವಿದನ್ನು ಯಾಕೆ ಹೇಳುತ್ತಿದ್ದೇವೆ ಅಂದ್ರೆ ತಂದೆ-ಮಗಳ ಮುದ್ದಾದ ಬಾಂಧವ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಗೆ ಲಿಪ್‌ಸ್ಟಿಕ್ ಹಾಕಿರುವ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ. ತಮಿಳುನಾಡಿನ ಐಪಿಎಸ್ ಅಧಿಕಾರಿ ವಿಜಯ್‌ ಕುಮಾರ್ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ವಿಜಯ್‌ಕುಮಾರ್‌ ಪುತ್ರಿ ಲಿಪ್‌ಸ್ಟಿಕ್‌ ಹಾಕುತ್ತಿರುವ ದೃಶ್ಯವಿದೆ. ತನ್ನ ತಂದೆಗೆ ಪುಟ್ಟ ಬಾಲೆ ಲಿಪ್‌ಸ್ಟಿಕ್ ಹಾಕಿದ್ದಾಳೆ. ಹೆಣ್ಣುಮಕ್ಕಳು / ಮಕ್ಕಳು ಜಗತ್ತಿನ ಎಲ್ಲಾ ಸಂತೋಷವನ್ನು ತರುತ್ತಾರೆ. ಮಗಳು ನೀಲಾ ತನ್ನೊಂದಿಗೆ ಎಂದು ಐಪಿಎಸ್ ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು 2.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅಪ್ಪ-ಮಗಳ ಸುಮಧುರ ಕ್ಷಣಗಳನ್ನು ವೀಕ್ಷಿಸಿದ ನೆಟ್ಟಿಗರು ಸಂತಸಗೊಂಡಿದ್ದಾರೆ.

— Vijayakumar IPS (@vijaypnpa_ips) January 9, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...