ಪ್ರೇಮ ಪತ್ರಗಳಿಂದ ನೆನಪಾದ ಹಳೆ ಪ್ರೇಮಿ, ಬಾಲ್ಯದ ಗೆಳತಿಯನ್ನ ಫೇಸ್ಬುಕ್ ಮೂಲಕ ಹುಡುಕಲು ಮುಂದಾದ 25ರ ಯುವಕ 11-01-2022 5:30PM IST / No Comments / Posted In: Latest News, Live News, International ಇಂಗ್ಲೆಂಡ್ ನ 25 ವರ್ಷದ ಜೋರ್ಡನ್ ಎನ್ನುವ ಯುವಕ ತನ್ನ ಬಾಲ್ಯದ ಪ್ರೀತಿಯನ್ನ ಮರಳಿ ಪಡೆಯಲು ಕಾತುರನಾಗಿದ್ದಾನೆ. ಹನ್ನೆರಡು ವರ್ಷದ ಹಿಂದೆ ಫ್ರಾನ್ಸ್ ನಲ್ಲಿ ಭೇಟಿಯಾದ ತನ್ನ ಪ್ರೀತಿಯ ಹುಡುಗಿಯನ್ನ ಮತ್ತೆ ಭೇಟಿಯಾಗಲು ಜೋರ್ಡನ್ ಕಾತುರನಾಗಿದ್ದಾನೆ. ಸಮಯದೊಂದಿಗೆ ಮರೆತು ಹೋಗಿದ್ದ ಹುಡುಗಿಯು, ಆತನ ರೂಂ ನಲ್ಲಿ ಹುದುಗಿ ಹೋಗಿದ್ದ ಪ್ರೇಮ ಪತ್ರಗಳನ್ನ ನೋಡಿದ ಮೇಲೆ ನೆನಪಾಗಿದ್ದಾಳೆ. ಹಳೆ ಪ್ರೇಮಿ ಬರೆದ ಪ್ರೇಮ ಪತ್ರಗಳನ್ನು ನೋಡಿದ ಮೇಲೆ ಜೋರ್ಡನ್ ನ ಹೃದಯ ಆಕೆಯನ್ನ ನೋಡಲು ಕಾತರಿಸುತ್ತಿದೆ. ರಗ್ಬಿ ಟೂರ್ನಮೆಂಟ್ ಸಲುವಾಗಿ 14ವರ್ಷದ ಜೋರ್ಡನ್ ಫ್ರಾನ್ಸ್ ಗೆ ಹೋಗಿದ್ದಾಗ, ಅಲ್ಲಿ ಆತನಿಗೆ ಕೇಟಿ ಎನ್ನುವ ಹದಿಮೂರು ವರ್ಷದ ಹುಡುಗಿ ಪರಿಚಯವಾಗಿದ್ದಾಳೆ. ಆಕೆ ನನ್ನ ನಗು ಮತ್ತು ಸಂತೋಷಕ್ಕೆ ಕಾರಣಳಾಗಿದ್ದಳು ಎಂದು ಜೋರ್ಡನ್ ಹೇಳಿಕೊಂಡಿದ್ದಾನೆ. ಆದರೆ ಟ್ರಿಪ್ ಮುಗಿದ ಮೇಲೆ ಇಬ್ಬರು ತಮ್ಮ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ. ಆದರು ಪತ್ರಗಳ ಮೂಲಕ ಇಬ್ಬರು ಮಾತನಾಡುತ್ತಿದ್ದರು. ಆದರೆ ಈ ಮಾತುಕತೆ ಕೆಲದಿನಗಳಲ್ಲಿ ಮುಗಿದು ಹೋಯಿತು. ಆದರೆ ಜೋರ್ಡನ್ ಗೆ ಇತ್ತೀಚಿಗೆ ತನ್ನ ರೂಂನಲ್ಲಿ ಕೇಟಿ ಬರೆದ ಪ್ರೇಮ ಪತ್ರಗಳು ದೊರಕಿವೆ. ಪತ್ರಗಳನ್ನ ನೋಡಿದ್ಮೇಲೆ ಬಾಲ್ಯದ ಪ್ರೀತಿ ನೆನಪಾಗಿದ್ದು, ಕೇಟಿಯನ್ನ ಮತ್ತೆ ಸಂಪರ್ಕಿಸಲು ಜೋರ್ಡನ್ ಎಲ್ಲಾ ಪ್ರೇಮ ಪತ್ರಗಳ ಫೋಟೊ ಕ್ಲಿಕ್ಕಿಸಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾನೆ. ಸೋಷಿಯಲ್ ಮೀಡಿಯಾದ ಮೂಲಕ ಕಳೆದು ಹೋದ ಪ್ರೀತಿಯನ್ನು ಹುಡುಕಲು ಜೋರ್ಡನ್ ಮುಂದಾಗಿದ್ದಾನೆ. ಪೋಸ್ಟ್ ನೋಡಿದ ಹಲವರು ಜೋರ್ಡನ್ ಗೆ ಪ್ರೋತ್ಸಾಹ ತುಂಬಿದ್ದಾರೆ.