alex Certify ಮಹಿಳಾ ಪ್ಯಾಸೆಂಜರ್‌ ಮೇಲೆ ನವವಿವಾಹಿತ ಆಟೋ ಚಾಲಕನಿಂದ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪ್ಯಾಸೆಂಜರ್‌ ಮೇಲೆ ನವವಿವಾಹಿತ ಆಟೋ ಚಾಲಕನಿಂದ ಅತ್ಯಾಚಾರ

ಡ್ರಾಪ್​ ಮಾಡುವ ನೆಪದಲ್ಲಿ 35 ವರ್ಷದ ಮಹಿಳಾ ಪ್ರಯಾಣಿಕರ ಮೇಲೆ ಆಟೋ ರಿಕ್ಷಾ ಚಾಲಕ ಅತ್ಯಾಚಾರವೆಸಗಿದ ದಾರುಣ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢದ ಸೆಕ್ಟರ್​ 17 ಐಎಸ್​ಬಿಟಿಗೆ ಡ್ರಾಪ್​ ಕೊಡುವ ನೆಪದಲ್ಲಿ ಕಾಮುಕ ಈ ಕೃತ್ಯ ಎಸಗಿದ್ದಾನೆ. ಭಾನುವಾರದಂದು ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು 27 ವರ್ಷದ ಜಯದೇವ್​ ಅಲಿಯಾ ಉಪೇಂದರ್​ನನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಈತ ಚಂಡೀಗಢ ರೈಲೆ ನಿಲ್ದಾಣದ ಸಮೀಪದ ದಾರ್ವಾ ಎಂಬ ಪ್ರದೇಶದಲ್ಲಿ ವಾಸವಿದ್ದ ಎನ್ನಲಾಗಿದೆ.

ಪ್ರಕರಣ ಸಂಬಂಧ ಮಾಹಿತಿ ಹಂಚಿಕೊಂಡ ಸೆಕ್ಟರ್​ 17 ಸ್ಟೇಷನ್​ ಹೌಸ್​ ಆಫೀಸರ್​ ಓಂ ಪ್ರಕಾಶ್​, ಸಂತ್ರಸ್ತೆಯು ದೆಹಲಿ ಮೂಲದವರಾಗಿದ್ದಾರೆ. ಯಾರನ್ನೋ ಭೇಟಿಯಾಗುವ ನಿಮಿತ್ತ ಅವರು ಚಂಡೀಗಢಕ್ಕೆ ಆಗಮಿಸಿದ್ದರು. ಆದರೆ ಆ ವ್ಯಕ್ತಿಯನ್ನು ಭೇಟಿಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ದೆಹಲಿಗೆ ವಾಪಸ್ಸಾಗಿಲು ನಿರ್ಧರಿಸಿದ್ದರು. ಹೀಗಾಗಿ ಚಂಡೀಗಢ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದರು.

ಆದರೆ ಆ ಸಮಯದಲ್ಲಿ ದೆಹಲಿಗೆ ತೆರಳುವ ಯಾವುದೇ ರೈಲು ಲಭ್ಯವಿರಲಿಲ್ಲ. ಹೀಗಾಗಿ ಅವರು ಬಸ್​ ಮೂಲಕ ದೆಹಲಿಗೆ ತೆರಳಲು ನಿರ್ಧರಿಸಿದ್ದರು. ಹೀಗಾಗಿ ಅವರು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ತೆರಳಲು ಆಟೋ ಏರಿದ್ದರು ಎನ್ನಲಾಗಿದೆ.

ಆಟೋ ಚಾಲಕ ಮಹಿಳೆಯನ್ನು ಬಸ್​ ನಿಲ್ದಾಣಕ್ಕೆ ಡ್ರಾಪ್​ ಮಾಡುವ ಬದಲು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಟೋ ರಿಕ್ಷಾದಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಾಹಿತಿ ನೀಡಿದರು.

ಅತ್ಯಾಚಾರವೆಸಗಿದ ಬಳಿಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಕಾಮುಕ ಅವರನ್ನು ರಸ್ತೆಯ ಮೇಲೆಯೇ ಎಸೆದು ಹೋಗಿದ್ದಾನೆ. ನೈಟ್​ ಗಾರ್ಡ್ ಒಬ್ಬರು ರಸ್ತೆಯಲ್ಲಿ ಅಳುತ್ತಿದ್ದ ಸಂತ್ರಸ್ತೆಯನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ವಿಷಯ ತಿಳಿದ ಬಳಿಕ ನೈಟ್​ ಗಾರ್ಡ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆಟೋ ರಿಕ್ಷಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...