ಕಿರುಕುಳ ತಾಳದೆ, ಸೊಸೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳದ ಆರೋಪದಡಿ, 64 ವರ್ಷದ ಮಹಿಳೆಯೊಬ್ಬರಿಗೆ ಸುಪ್ರೀಂ ಕೋರ್ಟ್ ಶಿಕ್ಷೆ ವಿಧಿಸಿದೆ.
ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ 64 ವರ್ಷದ ಮಹಿಳೆಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯ, ಅತ್ತೆ ಸಲ್ಲಿಸಿದ್ದ ಜಾಮೀನು ಮನವಿಯನ್ನು ತಿರಸ್ಕರಿಸಿದೆ. ಈಕೆಯು ಮಹಿಳೆಯಾಗಿ ತನ್ನ ಸೊಸೆ ಮೇಲೆ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕ್ರೌರ್ಯವನ್ನು ತೋರಿದಾಗ ಅದು ಹೆಚ್ಚು ಗಂಭೀರವಾದ ಅಪರಾಧವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ
ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು ರಕ್ಷಿಸದಿದ್ದರೆ, ನಂತರದವಳು ಅಂದರೆ ಮತ್ತೊಬ್ಬ ಮಹಿಳೆಯೇ ದುರ್ಬಲಳಾಗುತ್ತಾಳೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಅತ್ತೆ, ಸೊಸೆಯ ಮೇಲೆ ಎಸಗಿರುವ ಕ್ರೌರ್ಯಕ್ಕೆ ನ್ಯಾಯಾಲಯ ಶಿಕ್ಷೆ ನೀಡಿದ್ದು, ಈಕೆ ಮೂರು ತಿಂಗಳು ಜೈಲಿನಲ್ಲಿ ಕಳೆಯಬೇಕಾಗಿದೆ.