ಭಜರಂಗಿ ಬಾಯಿಜಾನ್ ಚಿತ್ರದಲ್ಲಿ ಮುನ್ನಿ ಪಾತ್ರ ನಿರ್ವಹಿಸಿದ ಹರ್ಷಾಲಿ ಮಲ್ಹೋತ್ರ ಯಾರಿಗೆ ಗೊತ್ತಿಲ್ಲ. ಸಣ್ಣ ವಯಸ್ಸಿನಲ್ಲೆ ಸಿನಿದಿಗ್ಗಜ ಸಲ್ಮಾನ್ ಅವ್ರೊಂದಿಗೆ ಅಮೋಘವಾಗಿ ಅಭಿನಯಿಸಿ ಸೈ ಎನಿಸಿಕೊಂಡ ಮುನ್ನಿ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ. ಹದಿಮೂರನೇ ವಯಸ್ಸಿಗೆ ಹರ್ಷಾಲಿ ಮಲ್ಹೋತ್ರಾಗೆ ಮಹಾರಾಷ್ಟ್ರ ಸರ್ಕಾರ, ಭಾರತ ರತ್ನ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ.
ಪುಟ್ಟ ವಯಸ್ಸಿನಲ್ಲೆ ಭಜರಂಗಿ ಭಾಯಿಜಾನ್ ಸೇರಿದಂತೆ ಹಲವು ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿ ಸಿನಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಹರ್ಷಾಲಿಗೆ, 2022ರ, 12ನೇ ವರ್ಷದ ಅಂಬೇಡ್ಕರ್ ಪ್ರಶಸ್ತಿ ದೊರೆತಿದೆ.
ಮಹಾರಾಷ್ಟ್ರ ಸರ್ಕಾರ ಕಳೆದ ಹನ್ನೆರಡು ವರ್ಷಗಳಿಂದ ಸಂವಿಧಾನ ರಚಿಸಿದ ಭಾರತ ರತ್ನ ಅಂಬೇಡ್ಕರ್ ಸ್ಮರಣಾರ್ಥವಾಗಿ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಿದೆ. ಈ ವರ್ಷ ಈ ಪ್ರಶಸ್ತಿ ಹರ್ಷಾಲಿ ಪಾಲಾಗಿದ್ದು, ಮಹಾರಾಷ್ಟ್ರ ಸರ್ಕಾರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ಪುಟ್ಟ ವಯಸ್ಸಿನಲ್ಲಿಯೆ, 12ನೇ ವರ್ಷದ ಅಂಬೇಡ್ಕರ್ ಪ್ರಶಸ್ತಿ ಪಡೆದಿರುವ ಹರ್ಷಾಲಿ ಈ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಪ್ರಶಸ್ತಿ ಕೈಯ್ಯಲ್ಲಿಡಿದುಕೊಂಡು ತೆಗೆಸಿಕೊಂಡಿರುವ ಫೋಟೊ ಹಂಚಿಕೊಂಡಿರುವ ಹರ್ಷಾಲಿ ತಮ್ಮ ನೆಚ್ಚಿನ ಕೋ ಸ್ಟಾರ್ ಸಲ್ಮಾನ್ ಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಭಜರಂಗಿ ಬಾಯಿಜಾನ್ ಸಿನಿಮಾದ ನಿರ್ದೇಶದ ಕಬೀರ್ ಖಾನ್ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.