alex Certify ಗಂಡನ ಕನಸಿನ ಕೂಸಿಗೆ ಜೀವ ತುಂಬಿದ ಮಡದಿ, ʼಕೆಫೆ ಕಾಫಿ ಡೇʼ ಯನ್ನು ಮತ್ತೆ ಟ್ರಾಕ್ ಗೆ ತರಲು ಸಿದ್ಧರಾದ ಮಾಳವಿಕ ಹೆಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನ ಕನಸಿನ ಕೂಸಿಗೆ ಜೀವ ತುಂಬಿದ ಮಡದಿ, ʼಕೆಫೆ ಕಾಫಿ ಡೇʼ ಯನ್ನು ಮತ್ತೆ ಟ್ರಾಕ್ ಗೆ ತರಲು ಸಿದ್ಧರಾದ ಮಾಳವಿಕ ಹೆಗಡೆ

2019 ರಲ್ಲಿ ಸಿದ್ಧಾರ್ಥ್ ಹೆಗಡೆ ಅವರು ಆತ್ಮಹತ್ಯೆ ಘಟನೆ ನಿಮಗೆ ನೆನಪಿರಬೇಕಲ್ಲವೇ…? ನಷ್ಟದಲ್ಲಿ ನಡೆಯುತ್ತಿದ್ದ ಕಂಪನಿ, ಸಾಲಗಾರರ ಕಾಟ, ಆದಾಯ ತೆರಿಗೆ ಅಧಿಕಾರಿಗಳಿಂದ ಬೇಸತ್ತು ನದಿಗೆ ಹಾರಿ ಪ್ರಾಣ ಕಳೆದುಕೊಂಡ ಸಿದ್ಧಾರ್ಥ್ ಅವರನ್ನ ನೆನಸಿಕೊಂಡರೆ ಈಗಲೂ ಬೇಸರದ ಛಾಯೆ ಮೂಡುತ್ತದೆ. ಸಣ್ಣ ಸಾಲದ ಸುಳಿಯಲ್ಲಿ ಸಿಲುಕಿಕೊಂಡರೂ ತಲೆಮರೆಸಿಕೊಂಡು ಊರು ಬಿಡುವವರ ನಡುವಲ್ಲಿ, ಮಿನುಗುವವರು ಸಿದ್ಧಾರ್ಥ್ ಅವರ ಧರ್ಮಪತ್ನಿ ಮಾಳವಿಕ. ಗಂಡನನ್ನು ಕಳೆದುಕೊಂಡ ಸಂದರ್ಭದಲ್ಲೂ ಬೇರೆ ದೇಶಕ್ಕೆ ಹಾರದೆ, ಅವರ ಕನಸಿನ‌ ಕೂಸಿನ ಜವಾಬ್ದಾರಿ ತೆಗೆದುಕೊಂಡು ಕೆಫೆ ಕಾಫಿ ಡೇಯ ಸಿಇಒ ಆದ ಮಾಳವಿಕ ಹಲವು ತೊಡಕುಗಳನ್ನ ಎದುರಿಸಿ, ಈಗ ಸಿಸಿಡಿಯ ಹೊಸ ಪರ್ವಕ್ಕೆ ನಾಂದಿ ಹಾಡಲು ಸಿದ್ಧರಾಗಿದ್ದಾರೆ.

ದೈತ್ಯ ಫುಡ್ ಚೈನ್ ಗಳ ನಡುವೆ ದೈತ್ಯವಾಗೇ ಬೆಳೆದ ಸಿಸಿಡಿಯ ಜವಾಬ್ದಾರಿ ವಹಿಸಿಕೊಳ್ಳುವುದು ಸುಲಭದ ಮಾತಲ್ಲ. ಅದು ಸಾವಿರಾರು ಕೋಟಿಯಷ್ಟು ನಷ್ಟದಲ್ಲಿ ನಡೆಯುತ್ತಿದ್ದ ಕಂಪನಿಯನ್ನ ತನ್ನ ಹೆಗಲ ಮೇಲೆ ಹೊತ್ತು ಮಾಳವಿಕ ಬೆಳೆಸಿದ್ದಾರೆ, ಬೆಳೆಸುತ್ತಿದ್ದಾರೆ. 2020ರಲ್ಲಿ ಕಾಫಿಡೇ ಎಂಟರ್ ಪ್ರೈಸಸ್ ನ ಸಿಇಒ ಸ್ಥಾನವನ್ನ ಮಾಳವಿಕ ವಹಿಸಿಕೊಂಡಾಗ ಇಡೀ ದೇಶವೇ ಶಾಕ್ ನಿಂದ ತಿರುಗಿ ನೋಡಿತು.‌ ಬೆಟ್ಟದಷ್ಟು ಸಾಲವಿದ್ದ ಕಂಪನಿಯನ್ನ ಈಕೆ ಹೇಗೆ ನಡೆಸುತ್ತಾರೆ ಎಂದು ಆಶ್ಚರ್ಯಪಟ್ಟಿತ್ತು, ಆದರೆ ಮಾಳವಿಕ ತನ್ನ ಕೌಶಲ್ಯತೆಯಿಂದ ಸಿಸಿಡಿಯಲ್ಲಿ ಸುಧಾರಣೆ ತಂದಿದ್ದಾರೆ.

7 ಸಾವಿಕೋಟಿ ಸಾಲದಿಂದ ಅಭಿವೃದ್ಧಿ ಪರ್ವದತ್ತ ಕೆಫೆ ಕಾಫಿ ಡೇ

ಸಿಸಿಡಿ ಸಣ್ಣ ಕಂಪನಿಯಲ್ಲ, ದೇಶದಾದ್ಯಂತ ನೂರಾರು ಬ್ರ್ಯಾಂಚ್ ಗಳನ್ನ ಹೊಂದಿದೆ. ಸಾವಿರಾರು ಉದ್ಯೋಗಿಗಳಿದ್ದಾರೆ, ಕೋಟ್ಯಾಂತರ ಗ್ರಾಹಕರನ್ನ ಹೊಂದಿರುವ ಸಿಸಿಡಿ ಬೆನ್ನಿಗೆ ಅಷ್ಟೇ ದೊಡ್ಡ ಮೊತ್ತದ ಸಾಲ ಅಂಟಿಕೊಂಡಿತ್ತು. ಅದನ್ನ ಸವಾಲಾಗಿ ಸ್ವೀಕರಿಸಿ, ಮಾಳವಿಕ ಹೆಗ್ಡೆ ಧೈರ್ಯಶಾಲಿ ಮಾತ್ರವಲ್ಲ ಸಿಇಒ ಆಗಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ, ಸಿಡಿಇಎಲ್ ಸಾಲದ ಮೊತ್ತ ಗಮನಾರ್ಹವಾಗಿ ಕಡಿಮೆಯಾಗಿದೆ. ಕರ್ನಾಟಕದ ಕೆಫೆ ಕಂಪನಿಯನ್ನು ಮತ್ತೆ ಟ್ರ್ಯಾಕ್ ಮಾಡಲು ಮ್ಯಾನೇಜ್‌ಮೆಂಟ್ ಪ್ರಯತ್ನಿಸುತ್ತಿದೆ ಎಂಬುದು ಈ ಮೂಲಕ ಸಾಬೀತಾಗಿದೆ. ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 31, 2021 ರ ಹೊತ್ತಿಗೆ CDEL ನ ನಿವ್ವಳ ಸಾಲ 1,731 ಕೋಟಿ ರೂ.ಗಳಷ್ಟಿದೆ. ಒಟ್ಟು ಲೋನ್ 1,779 ಕೋಟಿಗಳಷ್ಟಿದೆ, ಇದು 1,263 ಕೋಟಿ ದೀರ್ಘಾವದಿ ಮತ್ತು 516 ಕೋಟಿ ರೂ.ಗಳ ಅಲ್ಪಾವಧಿ ಸಾಲಗಳನ್ನ ಒಳಗೊಂಡಿದೆ ಎಂದು ಸಿಸಿಡಿ ರಿಪೋರ್ಟ್ ಕಾರ್ಡ್ ಹೇಳಿದೆ. ಇದರಿಂದ ಕಂಪನಿಯು ಆರ್ಥಿಕವಾಗಿ ಗಣನೀಯ ಸುಧಾರಣೆ ಕಂಡಿರುವುದನ್ನು ಕಾಣಬಹುದು. ಇವರು ಸಿಇಓ ಆಗುವ ಮುನ್ನ ಕಂಪನಿ ಮೇಲೆ 7 ಸಾವಿರ ಕೋಟಿ ರೂ. ಗಿಂತ ಅಧಿಕ ಸಾಲದ ಹೊರೆ ಇತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...