ನವದೆಹಲಿ: ದೇಶದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಗರ್ಭಧರಿಸಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇನ್ನು ಕೃತಕ ಗರ್ಭಧಾರಣೆ ಮೊರೆ ಹೋಗುವವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ಹೇಳಲಾಗಿದೆ.
ಕೊರೋನಾ ಸೋಂಕು ತಡೆಗೆ ಜಾರಿಗೊಳಿಸಲಾದ ಲಾಕ್ಡೌನ್, ಕರ್ಫ್ಯೂ ಮೊದಲಾದ ಕಠಿಣ ನಿರ್ಬಂಧಗಳಿಂದ ಬಹುತೇಕ ಸಮಯವನ್ನು ಜನ ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಈ ಅವಧಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ಬಳಕೆಯ ಪ್ರಮಾಣ ಕಡಿಮೆಯಾಗಿದೆ.
ಹೋಟೆಲ್ ಮೊದಲಾದ ಅವಶ್ಯಕವಲ್ಲದ ಅಂಗಡಿ-ಮುಂಗಟ್ಟು ಮುಚ್ಚಿರುವುದು, ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳ ಸ್ಥಗಿತ, ಜಾಗೃತಿ ಅಭಿಯಾನ ರದ್ದು ಸೇರಿದಂತೆ ಹಲವು ಕಾರಣಗಳಿಂದ ಕಾಂಡೋಮ್ ಬಳಕೆ ಕಡಿಮೆಯಾಗಿದೆ.
ಕಾಂಡೋಮ್ ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿರುವ ಮಲೇಷ್ಯಾ ಮೂಲದ ಕರೆಕ್ಸ್ ಗೆ ಕಳೆದ ಎರಡು ವರ್ಷದಲ್ಲಿ ಶೇಕಡ 40 ರಷ್ಟು ಉತ್ಪಾದನೆ ಬೇಡಿಕೆ ಕುಸಿತವಾಗಿದೆ. ಇದು ಕಾಂಡೋಮ್ ಬಳಕೆ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ ಎನ್ನಲಾಗಿದೆ.