ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಭಾರತೀಯ ವಿವಾಹ ಅಂದ್ರೆ ಸಂಪ್ರದಾಯ, ಆಚಾರ-ವಿಚಾರಗಳು ಕೂಡ ತುಸು ಹೆಚ್ಚಾಗಿಯೇ ಇರುತ್ತದೆ. ಉತ್ತರ ಭಾರತದ ಮದೆಯಲ್ಲಿ ವರ ಮದುವೆಯ ದಿಬ್ಬಣದ ಮೆರವಣಿಗೆಯನ್ನು ಕುದುರೆಯೇರಿ ಬಂದ್ರೆ, ವಧು ಪಲ್ಲಕ್ಕಿಯಲ್ಲಿ ಬರುವುದು ಸಂಪ್ರದಾಯ. ಆದ್ರೆ, ಇಲ್ಲೊಂದೆಡೆ ಹಳೆ ಸಂಪ್ರದಾಯವನ್ನು ಮುರಿದು, ಹೊಸ ಇತಿಹಾಸಕ್ಕೆ ಈ ವಧು-ವರ ಮುನ್ನುಡಿ ಬರೆದಿದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ವಧು-ವರ ಜೊತೆಗೆ ಬರುವಂತಿಲ್ಲ. ಆದರೆ, ಇಲ್ಲೊಂದೆಡೆ ವಧು-ವರರು ಜೊತೆಯಲ್ಲೇ ಪ್ರತ್ಯೇಕವಾಗಿ ಕುದುರೆ ಸವಾರಿ ಮಾಡುತ್ತಾ ಬಂದಿದ್ದು, ಹಳೆ ಸಂಪ್ರದಾಯಕ್ಕೆ ಇತಿಶ್ರೀ ಹಾಕಿದ್ದಾರೆ. ವಧು-ವರ ಕುದುರೆಯ ಮೇಲೆ ಕುಳಿತಿರುವಾಗ ಪರಸ್ಪರರ ಕೈಗಳನ್ನು ಹಿಡಿದುಕೊಂಡು ಮದುವೆಯ ಸ್ಥಳಕ್ಕೆ ತೆರಳಿದ್ದಾರೆ. ಸುತ್ತಲೂ ನೆರೆದಿರುವ ಅತಿಥಿಗಳು ಜೋಡಿಯ ಗ್ರ್ಯಾಂಡ್ ಎಂಟ್ರಿಯನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿದಿದ್ದಾರೆ.
ಅಂದಹಾಗೆ, ಈ ವಿಡಿಯೋ ಯಾವಾಗಿನದು ಮತ್ತು ಎಲ್ಲಿನದು ಎಂಬ ಬಗ್ಗೆ ಖಚಿತವಾಗಿ ತಿಳಿದಿಲ್ಲ. ಆದರೆ, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಧು-ವರನ ಈ ಭವ್ಯ ಪ್ರವೇಶವನ್ನು ಕೆಲವು ನೆಟ್ಟಿಗರು ಇಷ್ಟಪಟ್ಟರೆ, ಇನ್ನೂ ಕೆಲವರು ಇಷ್ಟಪಟ್ಟಂತೆ ಕಂಡು ಬಂದಿಲ್ಲ.