ಮಧುರೈನ ಕೂಡಲ್ ಪುದೂರು ಪ್ರದೇಶದಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ವೊಡಾಫೋನ್ ಸೆಲ್ಫೋನ್ ಟವರ್ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ಕೂಡಲ್ ಪುದೂರಿನ ಅಮರಾವತಿ ಪ್ರದೇಶದಲ್ಲಿ 28.82 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಟಿಎಲ್ ಟವರ್ ಅನ್ನು ಸ್ಥಾಪಿಸಿದೆ. ಸಂಪರ್ಕ ಸಿಗುತ್ತಿಲ್ಲ ಎಂಬ ನಿರಂತರ ದೂರುಗಳು ವರದಿಯಾಗುತ್ತಿದ್ದಂತೆ, ದೂರಸಂಪರ್ಕ ಕಂಪನಿ ಸ್ಥಳೀಯ ಟವರ್ ಅನ್ನು ಪರಿಶೀಲಿಸಲು ನಿರ್ಧರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಆಘಾತಕಾರಿ ಸಂಗತಿಯೆಂದರೆ, ಸೆಲ್ ಫೋನ್ ಟವರ್ ಕಣ್ಮರೆಯಾಗಿದೆ ಎಂದು ಕಂಪನಿಯೇ ಮಾಹಿತಿ ನೀಡಿದೆ. ಈ ಬಗ್ಗೆ ಕಂಪನಿಯ ಮ್ಯಾನೇಜರ್ ಮುತ್ತು ವೆಂಕಟಕೃಷ್ಣನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದಾಗ ಸೆಲ್ಫೋನ್ ಟವರ್ ನಾಪತ್ತೆಯಾಗಿರುವುದು ದೃಢಪಟ್ಟಿದೆ. ಟವರ್ ನಿರ್ಮಿಸಿದ ಮಾಲೀಕ ಮತ್ತು ಅದನ್ನು ನಿರ್ಮಿಸಿದ ಗುತ್ತಿಗೆದಾರನ ನಡುವೆ ಜಗಳ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.