alex Certify ಫ್ಲಿಪ್‌ಕಾರ್ಟ್ ಗೋದಾಮಿಗೆ ನುಗ್ಗಿ‌ 12 ಲಕ್ಷ ನಗದು ದರೋಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲಿಪ್‌ಕಾರ್ಟ್ ಗೋದಾಮಿಗೆ ನುಗ್ಗಿ‌ 12 ಲಕ್ಷ ನಗದು ದರೋಡೆ

 

ಬಿಹಾರದ ಪಾಟ್ನಾದಲ್ಲಿ ಫ್ಲಿಪ್‌ಕಾರ್ಟ್‌ ಗೋದಾಮನ್ನ ಲೂಟಿ‌ ಮಾಡಲಾಗಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಪಾಟ್ನಾದ ದಿಘಾ ಆಶಿಯಾನಾ ರಸ್ತೆಯಲ್ಲಿರುವ ಫ್ಲಿಪ್‌ಕಾರ್ಟ್‌ನ ವಿತರಣಾ ಕೇಂದ್ರ ಕಚೇರಿಯನ್ನ ದುಷ್ಕರ್ಮಿಗಳು ಲೂಟಿ‌ಮಾಡಿದ್ದಾರೆ. ಗೋದಾಮಿಗೆ ಮುಖವಾಡ ಧರಿಸಿ ಒಳನುಗ್ಗಿದ ಒಂಭತ್ತು ವ್ಯಕ್ತಿಗಳ ಗುಂಪು, ಸುಮಾರು 12 ಲಕ್ಷ ರೂಪಾಯಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಫ್ಲಿಪ್‌ಕಾರ್ಟ್ ವಿತರಣಾ ಕೇಂದ್ರಕ್ಕೆ ಪ್ರವೇಶಿಸಿ, ಆ ದಿನ ಸಂಗ್ರಹವಾಗಿದ್ದ ಹಣವನ್ನು ಎಣಿಸುತ್ತಾ ಕ್ಯಾಷ್ ಕೌಂಟರ್ ನಲ್ಲಿ ಕುಳಿತಿದ್ದ ಉದ್ಯೋಗಿಗಳತ್ತ ಗನ್ ತೋರಿಸಿದ್ದಾರೆ. ಮೂವರು ದರೋಡೆಕೋರರು ಪಿಸ್ತೂಲ್‌ಗಳೊಂದಿಗೆ ಒಳಗೆ ಪ್ರವೇಶಿಸಿದ್ದಾರೆ, ಇನ್ನುಳಿದ ಆರು ಮಂದಿ ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಗೇಟ್‌ನಲ್ಲಿ ಕಾಯುತ್ತಾ ನಿಂತಿದ್ದಾರೆ. ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ, ದುಷ್ಕರ್ಮಿಗಳು ಇಡೀ ಕೇಂದ್ರದಲ್ಲಿ ಅಳವಡಿಸಲಾದ ಎಲ್ಲಾ ಸಿಸಿ ಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದಾರೆ. ನಗದು ಮತ್ತು ವಸ್ತುಗಳನ್ನು ತೆಗೆದುಕೊಂಡ ತಕ್ಷಣ ತಮ್ಮ ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲಿದ್ದ ಪಂಕಜ್ ಎಂಬ ಉದ್ಯೋಗಿ ಇವರನ್ನ ತಡೆಯಲು ಪ್ರಯತ್ನಿಸಿದಾಗ ಆತನಿಗೆ ಪಿಸ್ತೂಲ್ ನ ಹಿಂಬದಿಯಿಂದ ಹೊಡೆದು ಗಾಯಗೊಳಿಸಿದ್ದಾರೆ, ಆತ ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

BIG NEWS: ರಾಜಕಾರಣಿಗೊಂದು, ಸಾಮಾನ್ಯರಿಗೊಂದು ಕಾನೂನು ಇಲ್ಲ; ಇವರ ವರ್ತನೆ ಜನ ಕ್ಷಮಿಸಲ್ಲ; ಡಿ.ಕೆ.ಶಿ ವಿರುದ್ಧ ಕಿಡಿಕಾರಿದ ಸುಧಾಕರ್

ಪ್ರತಿದಿನದಂತೆ, ಗೋದಾಮಿನ ಶೆಟರ್ ಅನ್ನು ಅರ್ಧಕ್ಕಿಳಿಸಿ ನಗದು ಎಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ದರೋಡೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಇದೀಗ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...