ಇಂದಿನಿಂದ ಆಯ್ದ ಗುಂಪಿಗೆ ಬೂಸ್ಟರ್ ಡೋಸ್ ನೀಡಲಾಗ್ತಿದೆ. ಅದ್ರಲ್ಲಿ ಆರೋಗ್ಯ ಅಥವಾ ವೈದ್ಯಕೀಯ ಸಿಬ್ಬಂದಿಯು ಇದ್ದಾರೆ. ಆದರೆ ದೇಶದ ಪರಿಸ್ಥಿತಿ ನೋಡುವುದಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕಾ ಡೋಸ್ಗೆ ಅವರು ಯಾವಾಗ ಅರ್ಹರಾಗುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.
ಈ ಸಮಯದಲ್ಲಿ ಈ ಆರೋಗ್ಯ ಕಾರ್ಯಕರ್ತರು ಮುನ್ನೆಚ್ಚರಿಕೆಯ ಡೋಸ್ಗೆ ಅರ್ಹರಾಗುತ್ತಾರೆಯೇ ಅಥವಾ ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳಲು ಎಷ್ಟು ಸಮಯ ಕಾಯಬೇಕು ಎಂಬುದನ್ನು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿಲ್ಲ. ಆರೋಗ್ಯ ಸಚಿವಾಲಯ ಹೊರಡಿಸಿದ ಹಿಂದಿನ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ ಸೋಂಕಿಗೆ ತುತ್ತಾಗಿದ್ದವರು ಲಸಿಕೆ ತೆಗೆದುಕೊಳ್ಳಲು ಕನಿಷ್ಠ 90 ದಿನಗಳು ಅಥವಾ ಮೂರು ತಿಂಗಳು ಕಾಯಬೇಕಾಗಿತ್ತು.
ಪೆಟ್ರೋಲ್ ಪಂಪ್ ಬಳಿ ಸಿಗರೇಟ್ ಸೇದಿದವನಿಗೆ ಮಾಲೀಕ ಮಾಡಿದ್ದೇನು…? ಹಳೆ ವಿಡಿಯೋ ಮತ್ತೆ ವೈರಲ್
ಮೇ 2021 ರಲ್ಲಿ ಹೊರಡಿಸಲಾದ ಮಾರ್ಗಸೂಚಿ ಪ್ರಕಾರ, ಮೊದಲ ಡೋಸ್ ಪಡೆದ ನಂತರ ವೈರಸ್ ಸೋಂಕಿಗೆ ಒಳಗಾದವರು ಎರಡನೇ ಶಾಟ್, ಪಡೆಯುವ ಮೊದಲು ಚೇತರಿಸಿಕೊಂಡ ಮೂರು ತಿಂಗಳವರೆಗೂ ಕಾಯಬೇಕು ಎಂದು ಸರ್ಕಾರ ಹೇಳಿತ್ತು.
ವ್ಯಾಕ್ಸಿನೇಷನ್ ಪಡೆಯಲು ಈ ಹಿಂದೆ ಕೇಂದ್ರ ನೀಡಿದ್ದ ಮಾರ್ಗಸೂಚಿಗಳು ಇಲ್ಲಿವೆ.
ಕೋವಿಡ್ ಪಾಸಿಟಿವ್ ಆದ ವ್ಯಕ್ತಿಗಳು, ಲಸಿಕೆಯನ್ನು ಚೇತರಿಸಿಕೊಂಡ ನಂತರ ಮೂರು ತಿಂಗಳವರೆಗೆ ಮುಂದೂಡಲಾಗುವುದು.
ಆಂಟಿ-SARS-2 ಮೊನೊಕ್ಲೋನಲ್ ಪ್ರತಿಕಾಯಗಳು ಅಥವಾ ಕನ್ವೆಲೆಸೆಂಟ್ ಪ್ಲಾಸ್ಮಾವನ್ನು ಪಡೆದಿರುವ ಕೋವಿಡ್ ರೋಗಿಗಳು, ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ ಮೂರು ತಿಂಗಳವರೆಗೆ ವ್ಯಾಕ್ಸಿನೇಷನ್ ಅನ್ನು ಮುಂದೂಡಬೇಕು.
ಮೊದಲ ಡೋಸ್ ಪಡೆದು ಸೋಂಕಿಗೆ ತುತ್ತಾದವರು, ಚೇತರಿಕೆಯಾಗಿ ಮೂರು ತಿಂಗಳ ನಂತರ ಎರಡನೇ ಡೋಸ್ ಪಡೆಯಬಹುದು.
ಆಸ್ಪತ್ರೆಗೆ ದಾಖಲಾಗುವ ಅಥವಾ ICU ಆರೈಕೆಯ ಅಗತ್ಯವಿರುವ ಯಾವುದೇ ಗಂಭೀರ ಸಾಮಾನ್ಯ ಕಾಯಿಲೆ ಇರುವ ವ್ಯಕ್ತಿಗಳು ಕೋವಿಡ್ ಲಸಿಕೆಯನ್ನು ಪಡೆಯಲು 4-8 ವಾರಗಳವರೆಗೆ ಕಾಯಬೇಕು.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಒಂದು ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ.