ಹೊಸ ವರ್ಷದಿಂದ ಏರ್ ಕಂಡಿಷನರ್, ರೆಫ್ರಿಜರೇಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕೋವಿಡ್ ಕಾರಣದಿಂದಾಗಿ ಉತ್ಪಾದನಾ ವೆಚ್ಚ ಏರಿಕೆಯಾದ ಕಾರಣ ಬೆಲೆ ಏರಿಕೆಗೆ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪನಿಗಳು ಮುಂದಾಗಿವೆ.
ಕಚ್ಛಾ ವಸ್ತುಗಳು ಹಾಗೂ ಸಾಗಾಟದ ವೆಚ್ಚಗಳು ಹೆಚ್ಚಾಗಿರುವ ಕಾರಣ ವಾಷಿಂಗ್ ಮಷಿನ್‌ಗಳ ಬೆಲೆಗಳಲ್ಲಿ 5-10% ಏರಿಕೆಯಾಗುವ ಸಾಧ್ಯತೆ ಇದೆ. ಎಲ್‌ಜಿ, ಪ್ಯಾನಾಸೋನಿಕ್ ಮತ್ತು ಹಯರ್‌ನಂಥ ಕೆಲವೊಂದು ಬ್ರಾಂಡ್‌ಗಳು ಅದಾಗಲೇ ತಮ್ಮ ಉತ್ಪನ್ನಗಳ ಬೆಲೆಗಳಲ್ಲಿ ಏರಿಕೆ ಮಾಡಿವೆ. ಇದೇ ತ್ರೈಮಾಸಿಕದ ವೇಳೆ ಗೋದ್ರೇಜ್, ಸೋನಿ ಮತ್ತು ಹಿಟಾಚಿಗಳು ಸಹ ಇದೇ ಕೆಲಸಕ್ಕೆ ಮುಂದಾಗಲಿವೆ ಎನ್ನಲಾಗುತ್ತಿದೆ.
ಅಂಚೆ ಕಚೇರಿಯಲ್ಲೂ ಸಿಗಲಿದೆ ಬಜಾಜ್ ನ ಈ ಎರಡು ವಿಮಾ ಯೋಜನೆ
ಹಯರ್ ಅಪ್ಲಾಯೆನ್ಸಸ್ ತನ್ನ ರೆಫ್ರಿಜರೇಟರ್‌ಗಳು, ವಾಷಿಂಗ್ ಮಷೀನ್‌ಗಳು ಹಾಗೂ ಎಸಿಗಳ ಬೆಲೆಯನ್ನು 3-5%ನಷ್ಟು ಹೆಚ್ಚಿಸಲು ಚಿಂತಿಸುತ್ತಿದ್ದರೆ, ಪ್ಯಾನಾಸೋನಿಕ್ ತನ್ನ ಎಸಿ ಬೆಲೆಗಳನ್ನು 8%ನಷ್ಟು ಏರಿಸಿದೆ.
ಕೋವಿಡ್-19 ಸಾಂಕ್ರಮಿಕದಿಂದಾಗಿ ಮಾನವ ಸಂಪನ್ಮೂಲದ ಸೀಮಿತ ಲಭ್ಯತೆ, ಹಾಗೂ ವಾರಾಂತ್ಯಗಳ ನಿರ್ಬಂಧಗಳಿಂದಾಗಿ ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತಿರುವ ಕಾರಣ ಬೆಲೆ ಏರಿಕೆಗಳು ಆಗುತ್ತಿದ್ದು, ಏಪ್ರಿಲ್-ಮೇ ಅವಧಿಯಲ್ಲಿ ಬೇಡಿಕೆ ಕೊಂಚ ತಗ್ಗಿದಾಗ ಬೆಲೆಗಳು ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ.