ಈಶಾನ್ಯದ ರಾಜ್ಯಗಳಿಗೆ ರೈಲ್ವೇ ಜಾಲ ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದರಲ್ಲಿ, ಅಗರ್ತಲಾ-ಜಿರಿಬಮ್ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಚಾಲನೆಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಜನವರಿ 8ರಂದು ಚಾಲನೆ ನೀಡಿದ್ದಾರೆ.
ಕೋವಿಡ್-19 ನಿರ್ಬಂಧಗಳನ್ನು ಪಾಲನೆ ಮಾಡುತ್ತಲೇ, ರೈಲ್ವೇ ಸಚಿವರಾದ ಅಶ್ವಿನಿ ಕುಮಾರ್ ವೈಷ್ಣವ್, ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ, ಮತ್ತು ಕೇಂದ್ರದ ಮತ್ತೊಬ್ಬ ಸಚಿವೆ ಪ್ರತಿಮಾ ಭೌಮಿಕ್, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಹ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಿದ್ದರು.
ಮದುವೆ ಮನೆಗೆ ನುಗ್ಗಿ ಐಎಎಸ್ ಅಧಿಕಾರಿ ದುರ್ವರ್ತನೆ: ನೆಟ್ಟಿಗರಿಂದ ತೀವ್ರ ಆಕ್ರೋಶ
ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಮೇಲ್ಕಂಡ ಮಾರ್ಗದಲ್ಲಿ ಸಂಚರಿಸಲಿರುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಆರು ಗಂಟೆಗಳ ಅವಧಿಯಲ್ಲಿ 300 ಕಿಮೀ ಕ್ರಮಿಸಲಿದೆ. ರೈಲಿನಲ್ಲಿ 10 ಬೋಗಿಗಳಿರಲಿದ್ದು, 2 ಎಸಿ ಚೇರ್ ಕಾರ್ ಕೋಚ್‌ಗಳು, ಎರಡು ದ್ವಿತೀಯ ದರ್ಜೆ ಚೇರ್ ಕಾರ್ ಕಂ ಬ್ರೇಕ್ ವ್ಯಾನ್, ಆರು ದ್ವಿತೀಯ ದರ್ಜೆ ಚೇರ್ ಕಾರುಗಳನ್ನು ಒದಗಿಸಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಅಗರ್ತಲಾದಿಂದ ಹೊರಡಲಿರುವ ಜನ ಶತಾಬ್ದಿ ಎಕ್ಸ್‌ಪ್ರೆಸ್, ಮಧ್ಯಾಹ್ನ 12 ಗಂಟೆಗೆ ಜಿರಿಬಮ್ ತಲುಪಿದೆ. ಅತ್ತಲಿಂದ, ಸಂಜೆ 4ಗಂಟೆಗೆ ಹೊರಟು ರಾತ್ರಿ 10 ಗಂಟೆಗೆ ಅಗರ್ತಲಾಗೆ ಮರಳಲಿದೆ ರೈಲು.