alex Certify ಸುಪ್ರೀಂ ಕೋರ್ಟ್: ನಾಲ್ವರು ನ್ಯಾಯಾಧೀಶರು, ಶೇ.5 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಪ್ರೀಂ ಕೋರ್ಟ್: ನಾಲ್ವರು ನ್ಯಾಯಾಧೀಶರು, ಶೇ.5 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರು ಮತ್ತು ಸಿಬ್ಬಂದಿ ವರ್ಗದ 5% ಮಂದಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳಲ್ಲಿ ತೀವ್ರತರನಾದ ಏರಿಕೆ ಕಂಡುಬಂದ ಬೆನ್ನಿಗೇ, ಸುಪ್ರೀಂ ಕೋರ್ಟ್ನ 32 ನ್ಯಾಯಾಧೀಶರ ಪೈಕಿ ನಾಲ್ವರಿಗೆ ಮತ್ತು 3,000 ಸಂಖ್ಯಾಬಲದ ಸಿಬ್ಬಂದಿ ವರ್ಗದ ಪೈಕಿ 150 ಮಂದಿಗೆ ಸೋಂಕು ತಗುಲಿದೆ.

UPI ತಾಂತ್ರಿಕ ದೋಷ: ಗೂಗಲ್ ಪೇ, ಪೇಟಿಎಂ ಬಳಕೆದಾರರಿಗೆ ಅಡಚಣೆ

ಪರಮೋಚ್ಛ ನ್ಯಾಯಾಲಯದ ಆವರಣದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸೋಮವಾರದಿಂದ ಶನಿವಾರದವರೆಗೂ ಈ ಕೇಂದ್ರ ಕೆಲಸ ಮಾಡಲಿದೆ.

ದೆಹಲಿಯಲ್ಲಿ ಶನಿವಾರ ಒಂದೇ ದಿನ ಕೋವಿಡ್‌ನಿಂದಾಗಿ ಏಳು ಮಂದಿ ಮೃತಪಟ್ಟಿದ್ದು, 20,181 ಕೇಸುಗಳಲ್ಲಿ ಪಾಸಿಟಿವ್‌ ಕಂಡು ಬಂದಿದ್ದು, ಸೋಂಕಿತರ ದರವು 19.60%ಗೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾನುವಾರ ಒಂದೇ ದಿನ 1,59,632 ಪ್ರಕರಣಗಳು ದಾಖಲಾಗಿದ್ದು, 327 ಸಾವುಗಳು ಸಂಭವಿಸಿವೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...