ಭಾರತದ ಇತಿಹಾಸದ ಪ್ರಮುಖ ಸಮಾಜ ಸುಧಾರಕರಲ್ಲಿ ಒಬ್ಬರಾದ ಆದಿ ಶಂಕರಾಚಾರ್ಯರ ಜನ್ಮ ಸ್ಥಳ ಕಾಲಡಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಳವನ್ನಾಗಿ ಘೋಷಿಸುವ ಸಂಬಂಧ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ (ಎನ್‌ಎಂಎ) ಚೇರ್ಮನ್ ತರುಣ್ ವಿಜಯ್ ಕಳೆದ ವಾರ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ರನ್ನು ಭೇಟಿಯಾಗಿದ್ದಾರೆ.
ಈ ಸಂಬಂಧ ಎಲ್ಲ ನೆರವು ನೀಡುವುದಾಗಿ ಆರೀಫ್ ಮೊಹಮ್ಮದ್ ತಮಗೆ ಭರವಸೆ ಕೊಟ್ಟಿದ್ದಾಗಿ ವಿಜಯ್ ಇದೇ ವೇಳೆ ತಿಳಿಸಿದ್ದಾರೆ.
1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಆಹಾರಧಾನ್ಯ ವಿತರಣೆಗೆ ಸೂಚನೆ
ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ) ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳನ್ನು ಘೋಷಿಸುತ್ತದೆ. ಈ ಜಾಗಗಳ ನಿರ್ವಹಣೆ ಮಾಡಲು ಕೇಂದ್ರ ಸರ್ಕಾರಕ್ಕೆ ವಹಿಸಿ, ಜೊತೆಗೆ ಅವುಗಳನ್ನು ಕಾಪಾಡಿ, ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನೂ ಇದೇ ವೇಳೆ ನೀಡಲಾಗುತ್ತದೆ. ಪ್ರಾಚ್ಯ ವಸ್ತು ತಾಣಗಳ ಕಾಯಿದೆ, 1958ರ ಅಡಿ ಈ ಸ್ಥಾನಮಾನ ಪಡೆದಿರುವ 3,600ಕ್ಕೂ ಹೆಚ್ಚಿನ ಸ್ಮಾರಕಗಳು ದೇಶಾದ್ಯಂತ ಇವೆ.
ಎಂಟನೇ ಶತಮಾನದ ಇತಿಹಾಸ ಹೊಂದಿರುವ ಕಾಲಡಿಯ ಮಹತ್ವ ಸಾರಲು ವಿವರವಾದ ವರದಿ ಸಿದ್ಧಪಡಿಸುವುದಾಗಿ ವಿಜಯ್ ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇದಾರನಾಥ ದೇಗುಲದ ಮುಂದೆ 13 ಅಡಿ ಉದ್ದವಿರುವ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ್ದರು.