ಮಹಿಳಾ ಬಾಕ್ಸರ್ ಹಾಗೂ ಟೋಕ್ಯೋ ಒಲಿಂಪಿಕ್ ಚಿನ್ನದ ವಿಜೇತೆ ಲವ್ಲಿನಾ ಬೊರ್ಗೊಹೈನ್, ಈಶಾನ್ಯ ಹಬ್ಬದ 9ನೇ ವರ್ಷಾಚರಣೆಯಲ್ಲಿ ಸಾಂಪ್ರದಾಯಿಕ ಅಸ್ಸಾಮಿ ಧಿರಿಸಿನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಇಡುತ್ತಾ ನೋಡುಗರ ಕಣ್ಮನ ಸೆಳೆದಿದ್ದಾರೆ.
ಗುವಾಹಾಟಿಯಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ಅಸ್ಸಾಮೀ ಮದುವೆ ವಸ್ತ್ರವೊಂದರಲ್ಲಿ ಲವ್ಲಿನಾ ಬೊರ್ಗೊಹೈನ್ ಮಿಂಚಿದಿದ್ದಾರೆ. ಇದೇ ವೇಳೆ, ಲವ್ಲಿನಾ ಬೊರ್ಗೊಹೈನ್ ಮತ್ತು ಅಸ್ಸಾಂನ ನಟ ಆದಿಲ್ ಹುಸೇನ್ರನ್ನು ಸನ್ಮಾನಿಸಲಾಗಿದೆ. ಲವ್ಲಿನಾ ಬೊರ್ಗೊಹೈನ್ ಮತ್ತು ಹುಸೇನ್ ರ್ಯಾಂಪ್ ಮೇಲೆ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ.
‘ಜನ್ ಧನ್’ ಖಾತೆ ತೆರೆಯುವುದರಲ್ಲಿ ಮಹಿಳೆಯರದ್ದೇ ಮೇಲುಗೈ
ಟೋಕ್ಯೋ 2020ರಲ್ಲಿ ಮಹಿಳೆಯರ 69ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗೆದ್ದಿರುವ ಲವ್ಲಿನಾ ಬೊರ್ಗೊಹೈನ್ ಪ್ಯಾರೀಸ್ 2024ರಲ್ಲಿ ಚಿನ್ನದ ಪದಕ ಜಯಿಸುವ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಈಶಾನ್ಯ ಹಬ್ಬವನ್ನು ಪ್ರತಿ ವರ್ಷದ ದೆಹಲಿಯಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಈ ಬಾರಿ ಗುವಾಹಾಟಿಯಲ್ಲಿ ಆಯೋಜಿಸಲಾಗಿದ್ದು, ಸೀಮಿತ ಮಂದಿಗೆ ಮಾತ್ರವೇ ಕಾರ್ಯಕ್ರಮಕ್ಕೆ ಬರಲು ಅವಕಾಶ ಕೊಟ್ಟು, ಲೈವ್ ಸ್ಟ್ರೀಮಿಂಗ್ ಅನ್ನು ಆನ್ಲೈನ್ ಮೂಲಕ ಶೇರ್ ಮಾಡಲಾಗಿತ್ತು.