ಕೊರೊನಾವೈರಸ್‌ಗೆ ತುತ್ತಾಗಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ಇಂದು ನಟಿ ಇಶಾ ಗುಪ್ತಾ ಸಹ ಸೇರ್ಪಡೆಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಇಶಾ ಕೊರೋನಾ ಪಾಸಿಟಿವ್ ಆಗಿರುವುದನ್ನ ದೃಢಪಡಿಸಿದ್ದಾರೆ. ಪ್ರಸ್ತುತ ಹೋಮ್ ಕ್ವಾರಂಟೈನ್ ನಲ್ಲಿರುವ ಇಶಾ, ತಮ್ಮನ್ನು ತಾವು ಪ್ರತ್ಯೇಕವಾಗಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೊರೋನಾ ವಿರುದ್ಧ ಸಂಪೂರ್ಣ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿದರು, ನನಗೆ ಕೋವಿಡ್ ತಗುಲಿದೆ. ನಾನು ಪ್ರೋಟೋಕಾಲ್ ಅನುಸರಿಸುತ್ತಿದ್ದೇನೆ ಮತ್ತು ನನ್ನನ್ನು ನಾನು ಪ್ರತ್ಯೇಕಿಸಿಕೊಂಡಿದ್ದೇನೆ. ಪ್ರಸ್ತುತ ಮನೆಯಲ್ಲೆ ಕ್ವಾರಂಟೈನ್ ಆಗಿದ್ದೇನೆ. ಕೊರೋನಾ ವೈರಸ್ ಅನ್ನು ಸೋಲಿಸಿ ಇನ್ನು ಸ್ಟ್ರಾಂಗ್ ಆಗಿ ಮತ್ತು ಉತ್ತಮವಾಗಿ ಹಿಂತಿರುಗುತ್ತೇನೆ ಎಂದು ನನಗೆ ನಂಬಿಕೆಯಿದೆ. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಮಾಸ್ಕ್ ಧರಿಸಿ. ನಿಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ ಎಂದು ಇಶಾ ತಮ್ಮ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ.
ಈ ನಡುವೆ, ಸ್ಮಾಲ್ ಸ್ಕ್ರೀನ್ ನ ತಾರೆ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ಅವರನ್ನು ಹೊರತುಪಡಿಸಿ ಅವರ ಇಡೀ ಕುಟುಂಬಕ್ಕೆ ಸೋಂಕು ತಗುಲಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ನಟಿ ಹೀನಾ ಖಾನ್, ಕೊರೋನಾ ಬಗ್ಗೆ ಎಚ್ಚರ ವಹಿಸಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ. ಕೊರೋನಾದ ಬಗ್ಗೆ ಅಸಡ್ಡೆ ಮಾಡಬೇಡಿ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ.