ಬೆಂಗಳೂರು: ವಾತಾವರಣದಲ್ಲಿ ಬದಲಾವಣೆಯಾಗಿ ಜ್ವರ, ನೆಗಡಿ, ಕೆಮ್ಮು ಬರುವುದು ಸಹಜ. ಅಂತೆಯೇ ಈ ಬಾರಿ ಕೂಡ ವೈರಲ್ ಇನ್ ಫೆಕ್ಷನ್ ಹೆಚ್ಚು ಹರಡುತ್ತಿದೆ. ಹಾಗಂತ ಅದು ಕೋವಿಡ್ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ಕೊರೊನಾ ಮೂರನೇ ಅಲೆ ಆರಂಭವಾಗಿದ್ದು, ರೂಪಾಂತರಗೊಂಡು ಒಮಿಕ್ರಾನ್ ಸೋಂಕಾಗಿ ಪತ್ತೆಯಾಗಿದೆ ಆದರೆ ಅದು ಈ ಹಿಂದಿನಂತೆ ಕೋವಿಡ್ ಮೊದಲ ಹಾಗೂ ಡೆಲ್ಟಾದಷ್ಟು ಅಪಾಯಕಾರಿಯಾಗಿಲ್ಲ ಎಂದು ಡಾ. ರಾಜು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಮೂರನೇ ಅಲೆ ಹಾಗೂ ಲಾಕ್ ಡೌನ್ ತಡೆಯುವ ಬಗ್ಗೆ ತಮ್ಮ ಹೊಸ ವಿಡಿಯೋ ಹಂಚಿಕೊಂಡಿರುವ ಡಾ. ರಾಜು, ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿತರಲ್ಲಿ ಯಾರಲ್ಲೂ ಅಪಾಯಕಾರಿ ಲಕ್ಷಣಗಳಾಗಲಿ, ಲಂಗ್ಸ್ ಇನ್ ಫೆಕ್ಷನ್ ಗಳಾಗಲಿ ಕಂಡುಬಂದಿಲ್ಲ. ಸಾಮಾನ್ಯ ನೆಗಡಿ, ಕೆಮ್ಮು, ಜ್ವರ, ಸುಸ್ತಿನಂತಹ ಸಮಸ್ಯೆಗಳು ಕಂಡುಬರುತ್ತಿವೆ ಹೊರತು ಆಸ್ಪತ್ರೆಗಳಿಗೆ ಅಡ್ಮಿಟ್ ಆಗುವಂತಹ ಅಥವಾ ಅಪಾಯಕಾರಿ ಗಂಭೀರವಾದ ಸಮಸ್ಯೆಯಾಗಲಿ ಇಲ್ಲ ಎಂದು ತಿಳಿಸಿದ್ದಾರೆ.
ಒಮಿಕ್ರಾನ್ ಎನ್ನುವುದು ಗುಣಪಡಿಸಲು ಸಾಧ್ಯವಿಲ್ಲದಂತಹ ವೈರಸ್ ಅಲ್ಲ, ಅದು ತಾನಾಗಿಯೇ ವಾಸಿಯಾಗುವಂತಹ ರೋಗ ಲಕ್ಷಣ ಎಂದು ಹೇಳಿರುವ ಡಾ. ರಾಜು, ಜನರಿಗೆ ಸಲಹೆಯೊಂದನ್ನು ನೀಡಿದ್ದಾರೆ. ಜ್ವರ, ನೆಗಡಿ, ಕೆಮ್ಮಿನಂತಹ ಸಾಮಾನ್ಯ ಲಕ್ಷಣ ಕಂಡುಬಂದರೆ ಆರ್ ಟಿ ಪಿಸಿಆರ್ ಟೆಸ್ಟ್ ಅಥವಾ ಕೋವಿಡ್ ಟೆಸ್ಟ್ ಗೆ ಒಳಪಡುವ ಅಗತ್ಯವಿಲ್ಲ. ಯಾವುದೇ ಆತಂಕ ಪಡುವ ಅಗತ್ಯವೂ ಇಲ್ಲ. ಟೆಸ್ಟ್ ಗಿಂತ ಹೆಚ್ಚು ರೆಸ್ಟ್ ಮಾಡಿ. ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.
ಜ್ವರ, ಕೆಮ್ಮು ಬಂದಿದೆ ಎಂದು ಟೆಸ್ಟ್ ಗೆ ಒಳಪಟ್ಟಷ್ಟೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತದೆ. ಪಾಸಿಟಿವ್ ಸಂಖ್ಯೆ ಹೆಚ್ಚಾಯ್ತು ಎಂದು ಸರ್ಕಾರ ಅನಿವಾರ್ಯವಾಗಿ ಲಾಕ್ ಡೌನ್ ಜಾರಿ ಮಾಡುತ್ತೆ. ಹಾಗಾಗಿ ಟೆಸ್ಟ್ ಮಾಡುವುದನ್ನು ಬಿಟ್ಟು ಸಾಮಾನ್ಯ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಮೇರೆಗೆ ಕೆಲ ಔಷಧಿಗಳನ್ನು ಪಡೆದು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಈಗಾಗಲೇ ಲಾಕ್ ಡೌನ್ ನಿಂದ ಎದುರಾದ ತೊಂದರೆಗಳನ್ನು, ಜನಸಾಮಾನ್ಯರ ಆರ್ಥಿಕ, ಔದ್ಯೋಗಿಕ ಸಮಸ್ಯೆಗಳನ್ನು ಕಂಡಿದ್ದೇವೆ. ಲಾಕ್ ಡೌನ್ ನಿಂದಾಗಿ ಜನರು ವೈರಸ್ ಗಿಂತಲೂ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ ಹೊರತು ಸಮಸ್ಯೆಗೆ ಪರಿಹಾರವಾಗಲ್ಲ ಎಂದು ಹೇಳಿದ್ದಾರೆ.
https://youtu.be/VjmieGhueW0