alex Certify ಸಚಿವ ಸೋಮಶೇಖರ್ ಪುತ್ರನ ಅಶ್ಲೀಲ ವಿಡಿಯೋ ಕೇಸ್ ನಲ್ಲಿ ಕಾಂಗ್ರೆಸ್ ಶಾಸಕನ ಪುತ್ರಿ ಭಾಗಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ಸೋಮಶೇಖರ್ ಪುತ್ರನ ಅಶ್ಲೀಲ ವಿಡಿಯೋ ಕೇಸ್ ನಲ್ಲಿ ಕಾಂಗ್ರೆಸ್ ಶಾಸಕನ ಪುತ್ರಿ ಭಾಗಿ…?

ಬೆಂಗಳೂರು: ಸಚಿವ ಎಸ್.ಟಿ. ಸೋಮಶೇಖರ್ ಪುತ್ರನಿಗೆ ಅಶ್ಲೀಲ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ರಾಹುಲ್ ಭಟ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರ ಪುತ್ರಿ ಕೂಡ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ಒಂದು ಕೋಟಿ ರೂಪಾಯಿ ಕೊಡದಿದ್ದರೆ ಅಶ್ಲೀಲ ವಿಡಿಯೋ ರಿಲೀಸ್ ಮಾಡುವುದಾಗಿ ಯುಕೆ ನಂಬರ್ ನಿಂದ ಭಾರತದಲ್ಲಿ ವಾಟ್ಸಾಪ್ ಕ್ರಿಯೇಟ್ ಮಾಡಿ ಸಂದೇಶ ಕಳುಹಿಸಲಾಗಿದೆ. ಈ ನಂಬರ್ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರ ಪುತ್ರಿಗೆ ಸೇರಿದ್ದಾಗಿದ್ದು, ಆಕೆ ಲಂಡನ್ ನಲ್ಲಿ ಇದ್ದಾಳೆ ಎಂದು ಹೇಳಲಾಗಿದೆ.

ಸಚಿವ ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್ ಈ ಕುರಿತಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...