ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.
ಮೇಕೆದಾಟು ಬಳಿಯ ಕಾವೇರಿ ಹಾಗೂ ಅರ್ಕಾವತಿ ನದಿ ಸಂಗಮದಲ್ಲಿ ಪಾದಯಾತ್ರೆಗೆ ಅಧಿಕೃತ ಚಾಲನೆ ದೊರೆತಿದೆ. ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಗಂಗಾ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರು ಕೂಡ ಭಾಗವಹಿಸಲಿದ್ದಾರೆ. ಮೇಕೆದಾಟುವಿಂದ ಆರಂಭವಾಗಲಿರುವ ಕಾಂಗ್ರೆಸ್ ಪಾದಯಾತ್ರೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಕೊನೆಗೊಳ್ಳಲಿದೆ. ಪಾದಯಾತ್ರೆಯ ಮಾರ್ಗದ ಬಗ್ಗೆ ಇಲ್ಲಿದೆ ಮಾಹಿತಿ
1ನೇ ದಿನ: ಸಂಗಮದಲ್ಲಿ ಪಾದಯಾತ್ರೆ ಆರಂಭ, ಎಗ್ಗನೂರಿನಲ್ಲಿ ಊಟ, ದೊಡ್ಡಾಲಹಳ್ಳಿಯಲ್ಲಿ ವಾಸ್ತವ್ಯ
2ನೇ ದಿನ: ದೊಡ್ಡಾಲಹಳ್ಳಿಯಿಂದ ಆರಂಭ. ಕನಕಪುರದಲ್ಲಿ ವಾಸ್ತವ್ಯ
3ನೇ ದಿನ: ಕನಕಪುರದಿಂದ ಆರಂಭ. ಚಿಕ್ಕೇನಹಳ್ಳಿಯಲ್ಲಿ ವಾಸ್ತವ್ಯ
4ನೇ ದಿನ: ಚಿಕ್ಕೇನಹಳ್ಳಿಯಿಂದ ಆರಂಭ, ರಾಮನಗರದಲ್ಲಿ ವಾಸ್ತವ್ಯ
5ನೇ ದಿನ: ರಾಮನಗರದಿಂದ ಆರಂಭ. ಬಿಡದಿಯಲ್ಲಿ ವಾಸ್ತವ್ಯ
6ನೇ ದಿನ: ಬಿಡದಿಯಿಂದ ಆರಂಭ. ಕೆಂಗೇರಿ ಪೊಲೀಸ್ ಠಾಣೆ ಬಳಿ ವಾಸ್ತವ್ಯ
7ನೇ ದಿನ: ಕೆಂಗೇರಿಯಿಂದ ಆರಂಭ. ಸಾರಕ್ಕಿ ಬಳಿ ವಾಸ್ತವ್ಯ
8ನೇ ದಿನ: ಸಾರಕ್ಕಿಯಿಂದ ಮಾರತ್‌ಹಳ್ಳಿ ಜಂಕ್ಷನ್ ಬಳಿ ವಾಸ್ತವ್ಯ
9ನೇ ದಿನ: ಮಾರತ್‌ಹಳ್ಳಿಯಿಂದ ಹೊರಟು ಲಿಂಗರಾಜಪುರ ಜಂಕ್ಷನ್‌ನಲ್ಲಿ ವಾಸ್ತ ಹೆಣ್ಣೂರು ಕ್ರಾಸ್‌ನಿಂದ ಪಯಣ, ಕಾಂಗ್ರೆಸ್ ಭವನದಲ್ಲಿ ವಾಸ್ತವ್ಯ
10ನೇ ದಿನ: ಕಾಂಗ್ರೆಸ್ ಭವನದಿಂದ ನಡಿಗೆ, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ.