
ಭಾರತದಲ್ಲಿ ತನ್ನ ಎಸ್1 ಮತ್ತು ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದಾಗಿನಿಂದಲೂ ಓಲಾಗೆ ಒಂದಿಲ್ಲೊಂದು ಅಡಚಣೆಗಳು ಕಾಡುತ್ತಿವೆ.
ಮೊದಲಿಗೆ ಖರೀದಿ ಗವಾಕ್ಷಿಯಲ್ಲಿ ಸಮಸ್ಯೆ ಎದುರಿಸಿದ ಓಲಾ, ಸೆಮಿ ಕಂಡಕ್ಟರ್ ಪೂರೈಕೆಯ ವ್ಯತ್ಯಯದಿಂದಾಗಿ ಸ್ಕೂಟರ್‌ಗಳ ಉತ್ಪಾದನೆಯಲ್ಲಿ ವಿಳಂಬವಾಗಿ ಬುಕಿಂಗ್ ಆಗಿದ್ದ ಇವಿಗಳ ಡೆಲಿವರಿ ತಡವಾಗುವಂತೆ ಆಯಿತು.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೊಂದು ಖುಷಿ ಸುದ್ದಿ
ಡಿಸೆಂಬರ್ 2021ರಿಂದ ಎಸ್1 ಮತ್ತು ಎಸ್1 ಪ್ರೋ ಸ್ಕೂಟರ್‌ಗಳನ್ನು ಓಲಾ ಡೆಲಿವರಿ ಮಾಡಲು ಆರಂಭಿಸಿದರೂ ಸಹ ಇದುವರೆಗೂ ಗ್ರಾಹಕರನ್ನು ಮುಟ್ಟಿರುವ ಸ್ಕೂಟರ್‌ಗಳ ಸಂಖ್ಯೆ 250ಕ್ಕಿಂತ ಕಡಿಮೆ ಇದೆ. ಕಳೆದ ತಿಂಗಳು ಬರೀ 238 ಸ್ಕೂಟರ್‌ಗಳನ್ನು ಮಾತ್ರವೇ ಓಲಾ ಗ್ರಾಹಕರ ಮನೆಬಾಗಿಲಿಗೆ ತಲುಪಿಸಲು ಸಫಲವಾಗಿದೆ ಎಂದು ವಾಹನ್ ಪೋರ್ಟಲ್‌ನಿಂದ ತಿಳಿದು ಬಂದಿದೆ.
ಓಲಾದ ಸ್ಕೂಟರ್‌ಗಳ ಖರೀದಿ ವಿಂಡೋ ಸೆಪ್ಟೆಂಬರ್ 2021ರಲ್ಲಿ ಆರಂಭಗೊಳ್ಳುತ್ತಲೇ 4,000 ಆರ್ಡರ್‌ಗಳನ್ನು ಕಂಪನಿ ಸ್ವೀಕರಿಸಿತ್ತು. ಇವುಗಳಲ್ಲಿ ಕೆಲವೊಂದು ಸ್ಕೂಟರ್‌ಗಳನ್ನು ಡೆಲಿವರಿ ಮಾಡಿದ್ದು, ಕೆಲವು ಮಾರ್ಗಮಧ್ಯೆ ಇವೆ ಎಂದಿರುವ ಓಲಾ, ನೋಂದಣಿ ಪ್ರಕ್ರಿಯೆಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವ ಕಾರಣದಿಂದ ವಾಹನಗಳ ಡೆಲಿವರಿ ತಡವಾಗುತ್ತಾ ಬಂದಿದೆ ಎಂದು ತಿಳಿಸಿದೆ.
ಓಲಾ ಎಸ್1ನ ಬೆಲೆಯ 1 ಲಕ್ಷ ರೂ. ಇದ್ದು, ಬ್ಯಾಟರಿಯನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 115 ಕಿಮೀಗಳವರೆಗೂ ಓಡಬಲ್ಲದು. ಇದೇ ವೇಳೆ, ಎಸ್1 ಪ್ರೋನ ಬೆಲೆ 1.3 ಲಕ್ಷ ರೂ. ಇದ್ದು, ಒಮ್ಮೆ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದಲ್ಲಿ 181 ಕಿಮೀ ದೂರ ಸಾಗಬಲ್ಲದು.