ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್ʼ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದಿದ್ದು, ನಟಿ ರಶ್ಮಿಕಾ ಮಂದಣ್ಣ ಸಂಭಾವನೆಯನ್ನೂ ಹೆಚ್ಚಿಸಿದೆ.
ಹೌದು, ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಅಭಿನಯದ ಬಗ್ಗೆ ವೀಕ್ಷಕರು ಮತ್ತು ವಿಮರ್ಶಕರು ಹೊಗಳಿದ್ದಾರೆ. ಇದೀಗ ಈ ಚಿತ್ರದ ಯಶಸ್ಸಿನಿಂದ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣ, ಸುಕುಮಾರ್ ನಿರ್ದೇಶನದ ಚಿತ್ರದ ಎರಡನೇ ಭಾಗಕ್ಕಾಗಿ ಭಾರಿ ಮೊತ್ತದ ಸಂಭಾವನೆಯ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, ಪುಷ್ಪ: ದಿ ರೈಸ್ ಸಿನಿಮಾಕ್ಕಾಗಿ ರಶ್ಮಿಕಾ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಆದರೆ, ಪುಷ್ಪಾ -ದಿ ರೂಲ್‌ಗಾಗಿ ಅವರು 3 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಇದು ನಿಜನೇ ಆಗಿದ್ದಲ್ಲಿ ರಶ್ಮಿಕಾ ಟಾಲಿವುಡ್ ಅನ್ನು ಆಳುವುದ್ರಲ್ಲಿ ಸಂಶಯವೇ ಇಲ್ಲ.
ಪುಷ್ಪ ಭಾಗ-2 ಸಿನಿಮಾದ ಚಿತ್ರೀಕರಣ ಫೆಬ್ರವರಿಯಿಂದ ಮಾಡಲಾಗುವುದು ಎಂದು ಈ ಹಿಂದೆ ಚಿತ್ರದ ನಿರ್ದೇಶಕ ಸುಕುಮಾರ್ ಹೇಳಿದ್ದರು. 2022 ರ ಅಂತ್ಯದ ವೇಳೆಗೆ ಥಿಯೇಟರ್‌ಗಳಲ್ಲಿ ಲಗ್ಗೆಯಿಡಲು ಪ್ಲಾನ್ ಮಾಡಲಾಗುವುದು ಎಂದು ತಿಳಿಸಿದ್ದರು.