ಕಾಫಿ ಫಿಲ್ಟರ್ ಬಳಸುವವರು ನೀವಾಗಿದ್ದರೆ ಇದನ್ನು ಸ್ವಚ್ಛಗೊಳಿಸುವ ಕಷ್ಟ ನಿಮಗೆ ತಿಳಿದಿರುತ್ತದೆ. ಫಿಲ್ಟರ್ ಗಳಲ್ಲಿರುವ ಕಪ್ಪು ಕಲೆ ತೆಗೆಯುವುದು ಸವಾಲಿನ ಕೆಲಸ ಸ್ವಚ್ಛಗೊಳಿಸದೆ ಬಳಸಿದರೆ ಇದರಿಂದ ಆರೋಗ್ಯ ಕೆಡುತ್ತದೆ. ಹಾಗಾಗಿ ಫಿಲ್ಟರ್ ಅನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ವಿಧಾನ.
ನಿಮ್ಮ ಬಳಿ ಸ್ಟೀಲ್ ಫಿಲ್ಟರ್ ಇದ್ದರೆ ಅದನ್ನು ಸ್ವಚ್ಚಗೊಳಿಸಲು ಫಿಲ್ಟರ್ ಗೆ ಅಡುಗೆ ಸೋಡಾ ಸ್ವಲ್ಪ ನೀರು ಹಾಕಿ ಗ್ಯಾಸ್ ಮೇಲೆ ಇಟ್ಟು ಕಾಯಿಸಿ. ಇದರಿಂದ ಅದರಲ್ಲಿರುವ ಕಪ್ಪು ಕೊಳೆ ಸುಟ್ಟುಹೋಗುತ್ತದೆ. ನಂತರ ಅದನ್ನು ಹಲ್ಲುಜ್ಜುವ ಬ್ರಷ್ ನಿಂದ ಉಜ್ಜಬೇಕು. ಇದರಿಂದ ಫಿಲ್ಟರ್ ಸ್ವಚ್ಛವಾಗುತ್ತದೆ.
ನೀವು ಪ್ಲಾಸ್ಟಿಕ್ ಫಿಲ್ಟರ್ ಬಳಸಿದರೆ ಇದನ್ನು ಸ್ವಚ್ಛಗೊಳಿಸಲು ಸೋಪ್ ಬಳಸಿ. ರಾತ್ರಿ ಫಿಲ್ಟರ್ ಗೆ ಸೋಪ್ ಅನ್ನು ಹಚ್ಚಿ ಬೆಳಿಗ್ಗೆ ಬ್ರಶ್ ನಿಂದ ಉಜ್ಜಿದರೆ ಅದು ಸ್ವಚ್ಛವಾಗುತ್ತದೆ. ಇದನ್ನು ವಾರಕ್ಕೊಮ್ಮೆ ಮಾಡಿ.
ಬೇಕಿಂಗ್ ಪೌಡರ್ ಬಳಸಿ ಫಿಲ್ಟರ್ ಅನ್ನು ಸ್ವಚ್ಛ ಮಾಡಬಹುದು. ಬೇಕಿಂಗ್ ಪೌಡರ್ ಗೆ ನೀರು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಬ್ರಷ್ ನಲ್ಲಿ ತೆಗೆದುಕೊಂಡು ಟೀ ಫಿಲ್ಟರ್ ಮೇಲೆ ಉಜ್ಜಿ. ಸ್ವಲ್ಪ ಸಮಯ ಬಿಟ್ಟು ತೊಳೆದರೆ ಕಲೆ ಸ್ವಚ್ಛವಾಗುತ್ತದೆ.