ಕಿಮ್ ಕರ್ದಾಶಿಯನ್ ನ್ನಿಂದ ದೂರವಾದ ಮೇಲೆ ವೆಸ್ಟ್ , ನಟಿ ಜೂಲಿಯಾ ಫಾಕ್ಸ್ ಜೊತೆಗೆ ಓಡಾಡುತ್ತಿದ್ದಾರೆ ಅನ್ನೋ ಗಾಳಿಸುದ್ದಿ ಹಾಲಿವುಡ್ ತುಂಬಾ ಹರಿದಾಡಿತ್ತು. ಈಗ ಇವರಿಬ್ಬರ ಸಂಬಂಧ ಅಧಿಕೃತವಾಗಿದ್ದು, ಮ್ಯಾಗಜ಼ೈನ್ ಗೆ ಪೋಸ್ ನೀಡಿರುವುದು ವೆಸ್ಟ್-ಫಾಕ್ಸ್ ಜೋಡಿ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದ್ದಾರೆ.
ನ್ಯೂಯಾರ್ಕ್ ನ ಕಾರ್ಬೋನ್ ರೆಸ್ಟೋರೆಂಟ್ ನಲ್ಲಿ ರೋಮ್ಯಾಂಟಿಕ್ ಫೋಟೊಶೂಟ್ ಗೆ ಪೋಸ್ ಕೊಟ್ಟಿರುವ ಜೋಡಿ ಚಿತ್ರಗಳು ಆನ್ಲೈನ್ನಲ್ಲಿ ವೈರಲ್ ಆಗ್ತಿವೆ.
44 ವರ್ಷ ವಯಸ್ಸಿನ ಗಾಯಕ ಕಾನ್ಯೆ ವೆಸ್ಟ್, ಯೇ ಎಂಬ ಹೆಸರಿನೊಂದಿಗೆ ನಟಿ ಜೂಲಿಯಾ ಫಾಕ್ಸ್ ಳೊಂದಿಗೆ ಚಿತ್ರಗಳಿಗೆ ಪೋಸ್ ನೀಡಿದ್ದಾರೆ.
ಮ್ಯಾಗಜೀನ್ನ ಸಂದರ್ಶನದ ತುಣುಕಿನಲ್ಲಿ, ಜೂಲಿಯಾ ಅವರು ತಮ್ಮ ಎರಡನೇ ಡೇಟ್ ನಲ್ಲಿಯೆ ಯೇ ತನಗಾಗಿ ಇಷ್ಟು ದೊಡ್ಡ ಸರ್ ಪ್ರೈಸ್ ಯೋಜಿಸಿದ್ದಾರೆ ಎಂದು ತಿಳಿಸಿದರು.
ಹೊಸ ವರ್ಷದ ಮುನ್ನಾದಿನದಂದು ಮಿಯಾಮಿಯಲ್ಲಿ ‘ಯೇ’ ಯನ್ನು ಭೇಟಿಯಾದೆ, ನಮ್ಮಿಬ್ಬರ ನಡುವೆ ಒಳ್ಳೆ ಕನೆಕ್ಷನ್ ಸೃಷ್ಟಿಯಾಯ್ತು, ಎಂದು ಜೂಲಿಯಾ ಹೇಳಿದ್ದಾರೆ.
ಜನರು ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುವಾಗಲೇ ಫೋಟೋಶೂಟ್ ನಡೆದಿದೆ. ಇಡೀ ರೆಸ್ಟೋರೆಂಟ್ ಈ ಬಗ್ಗೆ ಉತ್ಸುಕವಾಗಿತ್ತು ಮತ್ತು ನಮ್ಮನ್ನು ಹುರಿದುಂಬಿಸಿತು. ಕಾನ್ಯೆ ನನಗಾಗಿ ಒಂದು ಕೋಣೆಯ ತುಂಬಾ ಬಟ್ಟೆಗಳನ್ನ ತುಂಬಿಸಿಟ್ಟರು. ಆ ಕ್ಷಣ ನಾನೇ ಸಿಂಡ್ರೆಲ್ಲಾ ಎನಿಸಿತು.
ಎರಡನೇ ಡೇಟ್ ಗೆ ಯಾರು ಹೀಗೆ ಮಾಡುತ್ತಾರೆ? ಅಥವಾ ಬೇರೆ ಯಾವುದೇ ಡೇಟ್ ನಲ್ಲಿ ಹೀಗೆ ತಮ್ಮ ಗೆಳತಿಗೆ ಸರ್ ಪ್ರೈಸ್ ನೀಡುತ್ತಾರೆ ಎಂದು ಜೂಲಿಯಾ ಹೇಳಿದ್ದಾರೆ.
ಒಮಾಂಕೋ ಮ್ಯಾಗಜ಼ೈನ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಇವರಿಬ್ಬರ ಚಿತ್ರಗಳನ್ನ ಹಂಚಿಕೊಂಡಿದ್ದು, ಈ ಜೋಡಿಗೆ ಅಭಿಮಾನಿಗಳ ಪ್ರೀತಿ ಸಿಗುತ್ತಿದೆ. ಕಳೆದ ವರ್ಷ ಕಿಮ್ ಹಾಗೂ ಕಾಮ್ಯೆ ತಮ್ಮ ದೀರ್ಘಕಾಲದ ದಾಂಪತ್ಯ ಜೀವನವನ್ನ ಅಂತ್ಯಗೊಳಿಸಿದ್ದರು.