ನಾಯಿ ಮರಿಯ ರೀತಿ ಜೀವನ ನಡೆಸುವುದಕ್ಕಾಗಿ ಉದ್ಯೋಗ ತೊರೆದ ಮಹಿಳೆಯೊಬ್ಬಳು, ಬೀದಿಯಲ್ಲಿ ನಾಯಿ ಕಾಳಗದಲ್ಲಿ ತೊಡಗಿದ ನಂತರ ಆನ್ಲೈನ್ನಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ.
ಮಹಿಳೆಯ ಹೆಸರು ಜೆನ್ನಾ ಫಿಲಿಪ್ಸ್ ಎಂದಾಗಿದ್ದು, ಈಕೆ ಪಪ್ಪಿ ಗರ್ಲ್ ಜೆನ್ನಾ ಎಂದೇ ಜನಪ್ರಿಯರಾಗಿದ್ದಾರೆ. ನಾಯಿ ಮರಿಯಾಗಿ ಬೀದಿಯಲ್ಲಿ ಕಾಣಿಸಿಕೊಳ್ಳುವ ಅವರಿಗೆ ಜನರು ನೀಡುವ ಹಣದಿಂದಲೇ 700,000 ಪೌಂಡ್ ಗಳಷ್ಟು ಮೊತ್ತವನ್ನು ಗಳಿಸಿದ್ದಾರೆ.
ಸಾಮಾನ್ಯವಾಗಿ ಶ್ವಾನಗಳು ಯಾವ ರೀತಿಯಾಗಿ ವರ್ತಿಸುತ್ತದೋ ಅದೇ ರೀತಿ ಜೆನ್ನಾ ಕೂಡ ವರ್ತಿಸುತ್ತಾರೆ. ನಾಯಿಮರಿಯಂತೆ ಆಟವಾಡುವುದು, ಪಾತ್ರೆಯಿಂದ ನೀರು ಕುಡಿಯುವುದು ಇತ್ಯಾದಿಗಳನ್ನು ಕೂಡ ಅವರು ಮಾಡುತ್ತಾರೆ.
ತನ್ನ ಇತ್ತೀಚಿನ ವಿಡಿಯೋದಲ್ಲಿ ಜೆನ್ನಾ, ತನ್ನ ಕುತ್ತಿಗೆಗೆ ನಾಯಿಯಂತೆ ಪಟ್ಟಿ ಕಟ್ಟಿಕೊಂಡು ನೆಲದ ಮೇಲೆ ತೆವಳುತ್ತಿರುವುದನ್ನು ನೋಡಬಹುದು. ಒಬ್ಬ ಮಹಿಳೆ ನಾಯಿಯಂತೆ ನಟಿಸುವುದು ಸಾಕಷ್ಟು ವಿಚಿತ್ರವಾಗಿದ್ದರೆ, ಇಲ್ಲಿಗೆ ಮತ್ತೊಬ್ಬ ಮಹಿಳೆ ಸೇರಿಕೊಳ್ಳುತ್ತಾಳೆ. ಆಕೆ ಕೂಡ ನಾಯಿಯಂತೆ ವರ್ತಿಸಿದ್ದು, ಇಬ್ಬರೂ ಬೊಗಳಲು ಶುರು ಮಾಡಿದ್ದಾರೆ.
ಮಹಿಳೆಯರ ನಾಯಿ ಕಾಳಗ ಶುರುವಾದಾಗ ಅಲ್ಲಿಗೆ ಎಂಟ್ರಿ ಕೊಟ್ಟ ಒಬ್ಬ ವ್ಯಕ್ತಿ ಶ್ವಾನದ ಮಾಲೀಕನ ರೀತಿ ಜೆನ್ನಾಗೆ ಅಲ್ಲಿಂದ ಹೋಗೋಣ ಎಂದು ಆದೇಶಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಮಿಲಿಯನೇರ್ ಜೋರ್ಡಾನ್ ಬೆಲ್ಫೋರ್ಟ್ ಅವರ ಗಮನ ಸೆಳೆದಿದೆ. ಅಲ್ಲದೆ ಮಹಿಳೆಯರ ಈ ವರ್ತನೆಯನ್ನು ಅವರು ಟೀಕಿಸಿದ್ದಾರೆ.
https://www.youtube.com/watch?v=SsnRVrXZX58