alex Certify ಮದುವೆಯಾಗದಿರುವುದರ ಹಿಂದಿನ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ ಸಲ್ಮಾನ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗದಿರುವುದರ ಹಿಂದಿನ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ ಸಲ್ಮಾನ್….!

ಸಲ್ಮಾನ್ ಮತ್ತು ಆತನ ಪ್ರೇಮ ಪ್ರಕರಣಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ? ಐಶ್ವರ್ಯಾಳಿಂದಿಡಿದು ಕತ್ರಿನಾವರೆಗೆ, ಸಲ್ಮಾನ್ ತನ್ನ ವೃತ್ತಿಜೀವನದ ಆರಂಭದಿಂದಲೂ ಅನೇಕ ಸಂಬಂಧಗಳನ್ನು ಹೊಂದಿದ್ದರು.

ಆದರೆ ಈವರೆಗೂ ತನ್ನ ಯಾವುದೇ ಗೆಳತಿಯರೊಂದಿಗೆ ನೆಲೆಗೊಳ್ಳಲು ಸಾಧ್ಯವಾಗಿಲ್ಲ. ಇಲ್ಲಿವರೆಗೂ ಸಲ್ಮಾನ್ ಅಭಿಮಾನಿಗಳಿಗೆ ಇರುವುದು ಒಂದೇ ಪ್ರಶ್ನೆ, ಭಾಯ್ ಯಾವಾಗ ಮದುವೆಯಾಗುತ್ತಾರೆ ಎನ್ನುವುದು, ಈ ಪ್ರಶ್ನೆಗೆ ಸಲ್ಮಾನ್ ಉತ್ತರ ನಗುವಷ್ಟೆ.

ಆದರೆ ಇತ್ತೀಚೆಗೆ ಸಲ್ಮಾನ್ ತಾನು ಯಾಕೆ ಮದುವೆಯಾಗಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ ಸೆಟ್ ನಲ್ಲಿ ತಾನು ಈ ನಟಿಯಿಂದ ಒಂಟಿಯಾಗಿದ್ದೇನೆ, ಇವರನ್ನ ಮದುವೆಯಾಗುವ ಬಯಕೆಯಿತ್ತು ನನಗೆ ಎಂದಿದ್ದಾರೆ. ಯಾರಪ್ಪ ಆ ನಟಿ ಅಂತಾ ನಿಮಗೂ ಅನ್ನಿಸಬಹುದು ಅವರು ಬೇರೆ ಯಾರಲ್ಲ, ಬಾಲಿವುಡ್ ನ ಎವರ್ ಗ್ರೀನ್ ನಟಿ ರೇಖಾ. ಸಲ್ಮಾನ್ ಗೆ ರೇಖಾರನ್ನ ಮದುವೆಯಾಗುವ ಬಯಕೆ ಇತ್ತಂತೆ, ಆಕೆಯಿಂದಲೇ ನಾನಿನ್ನು ಮದುವೆಯಾಗದೇ ಅವಿವಾಹಿತನಾಗಿದ್ದೇನೆ ಎಂದು ಸ್ವತಃ ಸಲ್ಮಾನ್ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಅದೇ ಸೆಟ್ ನಲ್ಲಿದ್ದ ಹಿರಿಯ ನಟಿ ರೇಖಾ ಪ್ರತಿಕ್ರಿಯಿಸಿದ್ದು, ಈ ಹಿಂದೆ ಸಲ್ಮಾನ್ ಚಿತ್ರರಂಗಕ್ಕೆ ಬರುವ ಮುನ್ನ ನಾವಿಬ್ಬರು ಅಕ್ಕಪಕ್ಕದ ಮನೆಯವರಾಗಿದ್ದೆವು. ನಾನು ಬೆಳಗ್ಗಿನ ಜಾವ 5:30ಕ್ಕೆ ವಾಕಿಂಗ್ ಗೆ ಹೋಗುವಾಗ ಸಲ್ಮಾನ್ ನನ್ನನ್ನು ಸೈಕಲ್ ನಲ್ಲಿ ಹಿಂಬಾಲಿಸುತ್ತಿದ್ದನು. ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದನು, ನನ್ನನ್ನು ಪ್ರತಿದಿನ ನೋಡಲೆಂದೇ ಯೋಗ ಶಾಲೆಗೂ ಸೇರಿಕೊಂಡಿದ್ದರು ಎಂದು ರೇಖಾ ಹಂಚಿಕೊಂಡರು‌. ಅಷ್ಟೇ ಅಲ್ಲಾ ಹದಿಹರೆಯದಲ್ಲಿದ್ದಾಗ ಸಲ್ಮಾನ್ ಆತನ ಸ್ನೇಹಿತರ ಬಳಿ ನಾನು ಮದುವೆಯಾಗುವುದಾದರೆ ರೇಖಾ ಅವ್ರನ್ನೆ ಎಂದು ಹೇಳಿದ್ದ, ಎಂದು ಸ್ವತಃ ರೇಖಾ ಹೇಳಿದ್ದಾರೆ‌.

ರೇಖಾ ಅವರಿಂದಲೇ ಇದನ್ನು ಕೇಳಿದ ಸಲ್ಮಾನ್ ನಾಚಿಕೆಪಡುತ್ತಲೇ, ಇವರಿಂದಾಗಿಯೆ ನಾನಿನ್ನೂ ಮದುವೆಯಾಗಿಲ್ಲ ಎಂದು ಹಾಸ್ಯದಿಂದ ಒಪ್ಪಿಕೊಂಡರು. ಈ ಹಿಂದೆ ಸಲ್ಮಾನ್ ಮತ್ತು ನಟಿ ಸಂಗೀತಾ ಬಿಜಲಾನಿ ವಿವಾಹವಾಗಲು ಸಿದ್ಧರಾಗಿದ್ದರು, ಆದರೆ ಕೊನೆ ಕ್ಷಣದಲ್ಲಿ ಇವರಿಬ್ಬರ ಮದುವೆ ರದ್ದಾಗಿತ್ತು. ಅದರ ನಂತರ, ಸಲ್ಮಾನ್, ಕತ್ರಿನಾ ಕೈಫ್ ಅವರನ್ನು ಮದುವೆಯಾಗುತ್ತಾರೆ, ಆಕೆಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿಯಿದ್ದರೂ ಈ ಸಂಬಂಧವು ಮುರಿದುಬಿತ್ತು. ಕೊನೆಯದಾಗಿ, ಸಲ್ಮಾನ್, ಮಾಡೆಲ್ ಮತ್ತು ಗಾಯಕಿ ಲುಲಿಯಾ ವಾಂಟೂರ್ ಅವರನ್ನು ಮದುವೆಯಾಗಲಿದ್ದಾರೆ ಎಂದು ವದಂತಿಗಳಿದ್ದವು, ಆದರೆ ಅವೆಲ್ಲವೂ ಆಧಾರರಹಿತ ವದಂತಿಗಳಾಗೇ ಉಳಿದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...