alex Certify ಗೃಹ ಸಚಿವರ ಜಿಲ್ಲೆಯಲ್ಲೇ ವೀಕೆಂಡ್‌ ಕರ್ಫ್ಯೂಗಿಲ್ಲ ಬೆಲೆ…! ನಿರ್ಬಂಧದ ನಡುವೆಯೂ ಶಾಸಕರ ಒಡೆತನದ ಕಾಲೇಜ್‌ ಓಪನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ ಸಚಿವರ ಜಿಲ್ಲೆಯಲ್ಲೇ ವೀಕೆಂಡ್‌ ಕರ್ಫ್ಯೂಗಿಲ್ಲ ಬೆಲೆ…! ನಿರ್ಬಂಧದ ನಡುವೆಯೂ ಶಾಸಕರ ಒಡೆತನದ ಕಾಲೇಜ್‌ ಓಪನ್

ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಜೊತೆಗೆ ಒಮಿಕ್ರಾನ್‌ ಭೀತಿಯೂ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದವಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇದರ ಮಧ್ಯೆಯೂ ಗೃಹ ಸಚಿವ ಆರಗ ಜ್ಞಾನೇಂದ್ರರವರ ತವರು ಜಿಲ್ಲೆಯಲ್ಲೇ ವೀಕೆಂಡ್‌ ಕರ್ಫ್ಯೂ ಉಲ್ಲಂಘಿಸಲಾಗಿದೆ. ಅದರಲ್ಲೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ್‌ ನಾಯ್ಕ್ ರ ಕಾಲೇಜೇ ನಿಯಮ ಉಲ್ಲಂಘಿಸಿರುವುದು ಅಚ್ಚರಿ ಮೂಡಿಸಿದೆ.

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ʼಅಕ್ಷರʼ ಕಾಲೇಜನ್ನು ಇಂದು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್‌ ಧರಿಸದೆ ತರಗತಿಯಲ್ಲಿ ಕುಳಿತಿದ್ದಾರೆ. ಇಂದು ಶಾಲಾ – ಕಾಲೇಜುಗಳನ್ನೂ ಸಹ ಬಂದ್‌ ಮಾಡಲು ಸೂಚಿಸಿದ್ದು, ಆದರೆ ಈ ಕಾಲೇಜು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತರಗತಿಯನ್ನು ನಡೆಸುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...