ಕೇಂದ್ರ ಸರ್ಕಾರದ ಲಕ್ಷಾಂತರ ಮಂದಿ ನೌಕರರಿಗೆ ಭಾರೀ ಖುಷಿ ಕೊಡುವ ಸುದ್ದಿಯೊಂದರಲ್ಲಿ, ಕಾಂಪೋಸಿಟ್ ವರ್ಗಾವಣೆ ಗ್ರಾಂಟ್ (ಸಿಟಿಜಿ) ಮೇಲಿದ್ದ ಮಿತಿಯನ್ನು ತೆಗೆದು ಹಾಕಲು ಭಾರತ ಸರ್ಕಾರ ನಿರ್ಧರಿಸಿದೆ.
ನಿವೃತ್ತನಾಗಲಿರುವ ನೌಕರ ಕೊನೆಯ ಬಾರಿಗೆ ಯಾವ ಜಾಗದಲ್ಲಿ ಕರ್ತವ್ಯದಲ್ಲಿರುತ್ತಾನೋ ಅಥವಾ ಆ ಜಾಗದಿಂದ 20 ಕಿಮೀಗಿಂತ ಕಡಿಮೆ ದೂರದಲ್ಲಿ ಅಲ್ಲಿ ನೆಲೆಗೊಳ್ಳಲು ನೋಡುವಾಗ ಈ ಸಿಟಿಜಿ ಲೆಕ್ಕಾಚಾರ ಬರುತ್ತಿತ್ತು. ಇಂಥ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವು ಸಂಬಂಧಪಟ್ಟ ನೌಕರರಿಗೆ ಸಿಟಿಇಜಿಯ ಮೂರನೇ ಒಂದು ಅಂಶವನ್ನು ಪಾವತಿ ಮಾಡುತ್ತಿತ್ತು.
Shocking News: ಶಿಕ್ಷಾ ಮಿತ್ರನಿಂದಲೇ 3ನೇ ತರಗತಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ
ಇದೇ ವೇಳೆ, ಬೇರೊಂದು ಸ್ಥಳದಲ್ಲಿ ನೆಲೆಗೊಳ್ಳಲು ಯತ್ನಿಸುವ ನಿವೃತ್ತ ನೌಕರರಿಗೆ ಸಿಟಿಜಿಯನ್ನು ಕೊನೆಯ ಬಾರಿಗೆ ಪಡೆಯುವ ಮೂಲ ವೇತನದ 100% ಮೊತ್ತವನ್ನು ಪಡೆಯುವ ಅವಕಾಶ ಇರುತ್ತದೆ. ಈ ಹಿಂದೆ ಇಂಥ ಸಂದರ್ಭದಲ್ಲಿ ಕೊಡುತ್ತಿದ್ದ ಸಿಟಿಸಿ ದರವು ಕೊನೆಯ ಬಾರಿಗೆ ಅಂಥ ನೌಕರ ಪಡೆಯುವ ಮೂಲ ವೇತನದ 80%ರಷ್ಟನ್ನು ಸಿಟಿಸಿ ರೂಪದಲ್ಲಿ ಕೊಡಲಾಗುತ್ತಿತ್ತು.
ತಮ್ಮ ಕರ್ತವ್ಯದ ಭಾಗವಾಗಿ ಕೆಲಸ ಮಾಡುವ ಕೊನೆಯ ಜಾಗದಿಂದ ಸ್ಥಳಾಂತರಗೊಂಡು ತಮ್ಮ ಶಾಶ್ವತ ಜಾಗಕ್ಕೆ ಹೋಗಲು ಕೊಡುವ ಆರ್ಥಿಕ ನೆರವು ಸಿಟಿಸಿ. ಅಂಥ ನೌಕರನೊಬ್ಬ ಕೊನೆಯ ಬಾರಿಗೆ ತೆಗೆದುಕೊಳ್ಳುವ ಮೂಲ ವೇತನದ 80%ನಷ್ಟನ್ನು ಸಿಟಿಸಿ ರೂಪದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪದಲ್ಲಿ ನಿವೃತ್ತಿಯಾಗುವ ವೇಳೆ ಕೆಲಸದಲ್ಲಿದ್ದರೆ ಈ ಮೊತ್ತ ಮೂಲ ವೇತನದ 100%ರಷ್ಟಿರುತ್ತದೆ.