alex Certify ನಿಮ್ಮ ಮೊಬೈಲ್‌ ಗೂ ಬಂದಿದೆಯಾ ಈ ಮೆಸೇಜ್….? ಹಾಗಿದ್ರೆ ಹುಶಾರ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೊಬೈಲ್‌ ಗೂ ಬಂದಿದೆಯಾ ಈ ಮೆಸೇಜ್….? ಹಾಗಿದ್ರೆ ಹುಶಾರ್‌…!

ದೇಶದಲ್ಲಿ ಆನ್ಲೈನ್ ವಂಚಕರ ಬಳಗ ದಿನೇ ದಿನೇ ಹೊಸ ತಂತ್ರಗಳನ್ನು ತಮ್ಮ ಕಸುಬಿಗೆ ಅಳವಡಿಸಿಕೊಳ್ಳುವ ಮೂಲಕ ಜನಸಾಮಾನ್ಯರ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ. ಇದೇ ವೇಳೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೀಗೆ ವಂಚನೆ ಎಸಗುವವರ ಕಾಟವೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ನೀವು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಗ್ರಾಹಕರಾಗಿದ್ದು, “Dear A/c Holder Your SBI Bank Documents has expired A/c will be Blocked. Update Your Document Now” ಎಂಬ ಎಸ್‌ಎಂಎಸ್‌ ಒಂದು ನಿಮ್ಮ ಮೊಬೈಲ್‌ಗೆ ಬಂದಿರಬಹುದು ಅಥವಾ ಬರಲೂಬಹುದು.

ಎಚ್ಚರ…! ಕೋವಿಡ್ 19‌ ಹೆಸರಿನಲ್ಲಿ ಇಂದಿನಿಂದ ನಡೆಯಬಹುದು ಮಹಾ ವಂಚನೆ – ಕೇಂದ್ರದಿಂದ ಮಹತ್ವದ ಸೂಚನೆ

“ನಿಮ್ಮ ಖಾತೆಗೆ ಲಗತ್ತಿಸುವ ದಾಖಲೆಗಳ ವಾಯಿದೆ ಮುಗಿದಿದ್ದು, ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ನಿಮ್ಮ ದಾಖಲೆಯನ್ನು ಈಗಲೇ ಅಪ್ಡೇಟ್ ಮಾಡಿ,” ಎಂಬ ಅರ್ಥದ ಈ ಎಸ್‌ಎಂಎಸ್ ಓದುವ ಖಾತೆದಾರರಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿ, ಆ ಎಸ್‌ಎಂಎಸ್‌ನಲ್ಲಿರುವ ಲಿಂಕ್ ಒತ್ತಿಬಿಡುವ ಸಾಧ್ಯತೆ ಇರುತ್ತದೆ.

ನೀವು ಯಾವ ಕಾರಣಕ್ಕೂ ಅಂಥ ಲಿಂಕ್‌ಗಳನ್ನು ಒತ್ತಬೇಡಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಿಐಬಿ ವಾಸ್ತವಾಂಶ ಸಾರುವ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.

“ನಿಮ್ಮ ಎಸ್‌ಬಿಐ ಖಾತೆಯನ್ನು ಬ್ಲಾಕ್ ಮಾಡಿರುವುದಾಗಿ ಹೇಳುವ ಸಂದೇಶವೊಂದು ಸುತ್ತು ಹೊಡೆಯುತ್ತಿದ್ದು ಇದು ನಕಲಿ. ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಕೇಳುವ ಯಾವುದೇ ಇ-ಮೆಲ್/ಎಸ್‌ಎಂಎಸ್‌ಗೆ ಪ್ರತಿಕ್ರಿಯೆ ನೀಡಬೇಡಿ. ಇಂಥ ಯಾವುದೇ ಸಂದೇಶವನ್ನು ನೀವು ಸ್ವೀಕರಿಸಿದಲ್ಲಿ, ಕೂಡಲೇ ಅದನ್ನು report.phishing@sbi.co.inಗೆ ವರದಿ ಮಾಡಿ” ಎಂದು ಪಿಐಬಿ ಟ್ವಿಟರ್‌ನಲ್ಲಿ ಎಚ್ಚರಿಕೆ ನೀಡಿದೆ.

ಲಾಟರಿ, ಕೆವೈಸಿ ಅಪ್ಡೇಟ್, ಅಥವಾ ಡೆಬಿಟ್‌/ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವ ನೆಪದಲ್ಲಿ ಕಳ್ಳರು ಬ್ಯಾಂಕ್ ಖಾತೆಗಳಿಂದ ದುಡ್ಡು ಲೂಟಿ ಹೊಡೆಯುತ್ತಿರುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಫಿಶಿಂಗ್ ಎಂದು ಕರೆಯಲಾಗುವ ಇಂಥ ವಂಚಕ ಜಾಲಗಳ ಮೂಲಕ ಮುಖ್ಯವಾದ ಐಡಿ/ಪಾಸ್ವರ್ಡ್‌ಗಳನ್ನೂ ಕದಿಯಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...