ಕೊಯಮತ್ತೂರು : ಜ್ಯೋತಿಷಿಯೊಬ್ಬನ ಭವಿಷ್ಯಕ್ಕೆ ಎರಡು ಜೀವಗಳು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ಜ್ಯೋತಿಷಿಯ ಮಾತು ಹೆಚ್ಚಾಗಿ ನಂಬುತ್ತಿದ್ದರು. ಆದರೆ, ಆ ವ್ಯಕ್ತಿ ಇವರನ್ನು ಹೆಚ್ಚು ಭಯಗೊಳಿಸಿದ್ದಾನೆ. ಹೀಗಾಗಿ ತಾಯಿಯು ತನ್ನ ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹೀಗೆ ಧನಲಕ್ಷ್ಮೀ(58), ಸುಗನ್ಯಾ(30) ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಇವರ ಮಗಳು ಅಂಗವೈಕಲ್ಯದಿಂದ ಬಳಲುತ್ತಿದ್ದರು. ಹೀಗಾಗಿ ಈ ಜ್ಯೋತಿಷಿ ನೀವು ಕೂಡ ಅಂಗವೈಕಲ್ಯ ಅನುಭವಿಸುತ್ತೀರಿ ಎಂದು ಹೇಳಿದ್ದಾನೆ. ಈ ಜ್ಯೋತಿಷಿ ಮಾತು ನಂಬಿದ್ದ ಮಹಿಳೆ, ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದರಿಂದ ಗಾಬರಿಗೊಂಡ ತಾಯಿ, ಮಗನಿಗೆ ಈ ವಿಷಯವನ್ನು ಹೇಳಿದ್ದಾರೆ. ಆದರೆ, ಇದನ್ನು ನಂಬಬೇಡ. ಹಾಗೇನಾದರೂ ಆದರೆ ನಾನು ಇರುತ್ತೇನೆ. ನಿನಗೆ ಏನೂ ಆಗುವುದಿಲ್ಲ ಎಂದು ಮಗ ಶಶಿಕುಮಾರ್ ಹೇಳಿದ್ದಾನೆ. ಆದರೂ ತಾಯಿ ಮಾತ್ರ ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಕ್ಕ ಪಕ್ಕದ ಮನೆಯವರು ಇದನ್ನು ನೋಡಿ ಮಗನಿಗೆ ಸುದ್ದಿ ಮುಟ್ಟಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಶವಗಳನ್ನು ಕಳುಹಿಸಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.