alex Certify ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿರುವ ಕೋಳಿ; ಅದನ್ನು ನೋಡಲು ಜನಜಂಗುಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿರುವ ಕೋಳಿ; ಅದನ್ನು ನೋಡಲು ಜನಜಂಗುಳಿ

ವಿಚಿತ್ರ ಗಾತ್ರದ ಮೊಟ್ಟೆ ಇಡುವ ಕೋಳಿಯೊಂದು ಪತ್ತೆಯಾಗಿದ್ದು, ಅದು ಆರಂಭದಲ್ಲಿ ಸಾಮಾನ್ಯವಾಗಿ ಎಲ್ಲ ಕೋಳಿಗಳು ಇಡುವಂತೆಯೇ ಮೊಟ್ಟೆ ಇಡುತ್ತಿತ್ತು. ಆದರೆ, ಇತ್ತೀಚೆಗೆ ಈ ಕೋಳಿ ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿದೆ ಎನ್ನಲಾಗಿದ್ದು, ಇದನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ಸಾಮಾನ್ಯವಾಗಿ ಕೋಳಿ ಮೊಟ್ಟೆಯಲ್ಲಿ ಬಿಳಿ ಹಾಗೂ ಹಳದಿ ಬಣ್ಣದ ಲೋಳೆ ಇರುತ್ತದೆ. ಆದರೆ, ಸದ್ಯ ಈ ಕೋಳಿ ಇಡುವ ಮೊಟ್ಟೆಯಲ್ಲಿ ಕೇವಲ ಬಿಳಿ ಲೋಳೆ ಮಾತ್ರ ಕಾಣಿಸುತ್ತಿದೆ.

ಈ ಕೋಳಿಗೆ ಐದು ವರ್ಷ. ಸಾಮಾನ್ಯವಾಗಿ ಎಲ್ಲ ಕೋಳಿಗಳು ತಿನ್ನುವ ಆಹಾರವನ್ನೇ ಇದು ಕೂಡ ತಿನ್ನುತ್ತಿದೆ. ಅಲ್ಲದೇ, ಸಾಮಾನ್ಯವಾಗಿ ಎಷ್ಟು ಬೇಕೋ ಅಷ್ಟು ಆಹಾರ ಕೂಡ ಸೇವಿಸುತ್ತಿದೆ. ಆದರೂ ಈ ಕೋಳಿ ವಿಚಿತ್ರವಾಗಿ ದ್ರಾಕ್ಷಿ ಗಾತ್ರದಷ್ಟೇ ಮೊಟ್ಟೆ ಇಡುತ್ತಿರುವುದಕ್ಕೆ ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗುತ್ತಿದೆ.

ಕೇರಳದ ಮಲಪ್ಪುರಂನ ಎ.ಆರ್. ನಗರ ಪ್ರದೇಶದಲ್ಲಿನ ಸಮದ್ ಎಂಬ ವ್ಯಕ್ತಿಯೊಬ್ಬರು ಸಾಕಿದ್ದ ಕೋಳಿಯೇ ಈ ರೀತಿಯ ವಿಚಿತ್ರ ಮೊಟ್ಟೆ ಇಡುತ್ತಿದೆ. ಈ ಕೋಳಿ ಇಡುತ್ತಿರುವ ದ್ರಾಕ್ಷಿ ಹಣ್ಣಿನ ಗಾತ್ರದ ಮೊಟ್ಟೆ ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಆಗಮಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...