ಕೊರೋನಾನ ರೂಪಾಂತರಿ ಒಮಿಕ್ರಾನ್ ನಿಂದ ಗಂಡಾಂತರ ಎದುರಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತಾಗಿ ಎಚ್ಚರಿಕೆ ನೀಡಿದೆ.
ರೂಪಾಂತರಿ ಒಮಿಕ್ರಾನ್ ತೀವ್ರತೆ ಕಡಿಮೆ ಇರಬಹುದು. ಆದರೆ, ಒಮಿಕ್ರಾನ್ ನ ಪ್ರಭಾವ ಕಡಿಮೆ ಎಂದು ತಿಳಿಯಬಾರದು. ಇದು ಸೌಮ್ಯ ಲಕ್ಷಣ ಹೊಂದಿದೆ ಎಂದು ಭಾವಿಸುವಂತಿಲ್ಲ. ಹಿಂದಿನ ವೈರಸ್ ಗಳಂತೆ ಒಮಿಕ್ರಾನ್ ಕೂಡ ಕಾಡುತ್ತಿದೆ. ಆಸ್ಪತ್ರೆಗಳಿಗೆ ಸೇರುವವರ ಸಂಖ್ಯೆ ಯು ಹೆಚ್ಚಳವಾಗುತ್ತಿದೆ. ಹಿಂದಿನಂತೆ ಸಾಯುವವರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ ಎಂದು ಹೇಳಲಾಗಿದೆ.
ರೂಪಾಂತರಿ ಒಮಿಕ್ರಾನ್ ಹರಡುವ ವೇಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಸಮಸ್ಯೆ ಎದುರಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ ನೀಡಲಾಗಿದೆ.